370 ವಿಧಿ ರದ್ದು ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆ: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಿಂದ ಸ್ಪಂದನೆಯಿಲ್ಲ; ಅಮೆರಿಕದಿಂದಲೂ ಅವಗಣನೆ

0
551

ವಿಶ್ವಸಂಸ್ಥೆಯ ಭದ್ರತಾ ಸಮಿತಿ ಮಾತ್ರವಲ್ಲ ಅಮೆರಿಕ ಕೂಡ ಸ್ಪಂದಿಸಿಲ್ಲ. ಅಮೆರಿಕ ವಿದೇಶ ಸಚಿವಾಲಯವು ಕಾಶ್ಮೀರದ ಕುರಿತು ಅಮೆರಿಕದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪಾಕಿಸ್ತಾನಕ್ಕೆ ತಿಳಿಸಿದೆ. ಅಮೆರಿಕದ ವಿದೇಶ ಸಚಿವಾಲಯದ ವಕ್ತಾರೆ ಮಾರ್ಗನ್ ಆರ್ಟಗಸ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಕಾಶ್ಮೀರದ ನೀತಿಯಲ್ಲಿ ಬದಲಾವಣೆಯಿಲ್ಲ ಎಂದರು. ಜಮ್ಮು ಕಾಶ್ಮೀರದಿಂದ 370ನೆ ವಿಧಿ ರದ್ದುಪಡಿಸಿದ ಕುರಿತು ಪಾಕಿಸ್ತಾನದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಪಾಕಿಸ್ತಾನವು ಭಾರತದೊಂದಿಗೆ ವ್ಯಾಪಾರ ಸಂಬಂಧವನ್ನು ಕಡಿದುಕೊಂಡಿದೆ. ಗುರವಾರ ಸಮ್‍ಜೋತಾ ಎಕ್ಸ್ ಪ್ರೆಸ್ ಅನ್ನು ಕೂಡ ರದ್ದುಪಡಿಸಿದೆ.