ಬೆಂಗಳೂರು, ಆ. 13: ಬೆಲ್ಗಾವಿಯಲ್ಲಿ ಭಾರೀ ಮಳೆಯಿಂದಾಗಿ ನೆರೆಯಲ್ಲಿ ಮುಳುಗಿಹೋದ ಮನೆಯೊಂದರ ಛಾವಣಿಯಲ್ಲಿ ಬೃಹತ್ ಮೊಸಳೆರಾಯ ಪವಡಿಸಿದ ವೀಡಿಯೊ ವೈರಲ್ ಆಗಿದೆ. ರಾಯ್‍ಬಾಗ್ ತಾಲೂಕಿನ ಮನೆಯೊಂದರ ಮಹಡಿಯಲ್ಲಿ ಮೊಸಲೆ ರವಿವಾರ ಕಂಡು ಬಂದಿತ್ತು. ಅರಣ್ಯಜೀವಿ ಅಧಿಕಾರಿಗಳು ಬರುವಷ್ಟರಲ್ಲಿ ಮೊಸಳೆ ಅಲ್ಲಿಂದ ಕಾಲ್ಕಿತ್ತಿತ್ತು.
ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿಯುವುದು ಮುಂದುವರಿಯುತ್ತಿದ್ದು ಅಪಾರ ಹಾನಿ ಸಂಭವಿಸಿದೆ. ಆರು ಲಕ್ಷಕ್ಕೂ ಹೆಚ್ಚು ಮಂದಿ ಸಂತ್ರಸ್ತರ ಶಿಬಿರದಲ್ಲಿದ್ದಾರೆ. ಮಳೆ ಈಗಲೂ ಮುಂದುವರಿಯುತ್ತಿದೆ.
#WATCH A crocodile lands on roof of a house in flood-affected Raybag taluk in Belgaum. #Karnataka (11.08.19) pic.twitter.com/wXbRRrx9kF
— ANI (@ANI) August 12, 2019












