ಮಾಂಸಾಹಾರ ಸೇವಿಸುವವನಿಗೆ ಬಾಡಿಗೆ ಮನೆ ಇಲ್ಲ: ರಂಗಸ್ವಾಮಿ ಹಂಚಿಕೊಂಡ ಸ್ಕ್ರೀನ್ ಶಾಟ್ ವೈರಲ್

0
1052

ಸನ್ಮಾರ್ಗ ವಾರ್ತೆ

ಇವತ್ತು ಬಾಡಿಗೆಗೆ ಮನೆ ಸಿಗುವುದು ಸುಲಭ ಅಲ್ಲ. ಹಾಗೆ ಮನೆ ಕೊಡುವುದಕ್ಕಿಂತ ಮೊದಲು ಮನೆಯ ಮಾಲೀಕನ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಆ ಪರೀಕ್ಷೆಯಲ್ಲಿ ಪಾಸಾದ ಬಳಿಕವೇ ಮನೆ ಸಿಗುತ್ತದೆ. ಇದೀಗ ಚೆನ್ನೈ ಯ ಪ್ರಶಾಂತ ರಂಗಸ್ವಾಮಿ ಎಂಬ ವ್ಯಕ್ತಿ ತಾನು ಎದುರಿಸಿದ ಇಂಥದ್ದೇ ಸಮಸ್ಯೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಂಸ ಸೇವಿಸುವ ವ್ಯಕ್ತಿಗೆ ಮನೆ ಬಾಡಿಗೆಗೆ ನೀಡುವುದಿಲ್ಲ ಎಂದು ಮಾಲಕ ಹೇಳಿರುವುದಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಹೇಳಿದ್ದಾರೆ.

ವೆಜಿಟೇರಿಯನ್ ಕುಟುಂಬಕ್ಕೆ ಮಾತ್ರ ಮನೆ ಬಾಡಿಗೆ ನೀಡುವುದಾಗಿ ಆ ಮಾಲಕ ಮೆಸೇಜ್ ಕಳುಹಿಸಿದ್ದಾರೆ. ಆ ಮೆಸೇಜಿನ ಸ್ಕ್ರೀನ್ ಶಾಟ್ ಅನ್ನು ರಂಗಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನೀವು ಚೆನ್ನೈಯಲ್ಲಿ ಬಾಡಿಗೆ ಮನೆಯನ್ನು ಹುಡುಕುತ್ತೀರಾದರೆ ನೀವು ಮಾಂಸವನ್ನು ಸೇವಿಸುವುದು , ಪಾಪವಾಗಿದೆ ಎಂಬ ಬರಹದೊಂದಿಗೆ ಅವರು ಈ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.

ಈ ಪೋಸ್ಟಿಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಆಹಾರದ ಹೆಸರಲ್ಲಿ ಮಾಡಲಾಗುವ ಈ ತಾರತಮ್ಯವನ್ನು ಅನೇಕ ಮಂದಿ ಖಂಡಿದ್ದಾರೆ.

ಜಾತಿ ಮತ್ತು ಧರ್ಮವನ್ನು ನೋಡಿಕೊಂಡು ದೇಶದ ಅನೇಕ ಭಾಗಗಳಲ್ಲಿ ಬಾಡಿಗೆಗೆ ಮನೆಯನ್ನು ನೀಡಲಾಗುತ್ತದೆ. ಅನೇಕರು ಇಂಥ ಅನುಭವವನ್ನು ಈ ಪೋಸ್ಟಿಗೆ ಪ್ರತಿಕ್ರಿಯೆಯಾಗಿ ಹಂಚಿಕೊಂಡಿದ್ದಾರೆ.