ಸನ್ಮಾರ್ಗ ವಾರ್ತೆ
ಒಂದು ದೇಶ ಒಂದು ಚುನಾವಣೆ ಎಂಬ ಕೇಂದ್ರ ಸರಕಾರದ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಬೆಂಬಲಿಸಿದ್ದಾರೆ. ಒಂದೇ ಬಾರಿ ದೇಶಾದ್ಯಂತ ಚುನಾವಣೆ ನಡೆಸುವುದಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡುವುದು ಸಂವಿಧಾನದ ಮೂಲ ಉದ್ದೇಶವನ್ನೇ ಉಲ್ಲಂಘಿಸಿದಂತಾಗುತ್ತದೆ ಎಂಬ ವಾದವನ್ನು ಅವರು ತಳ್ಳಿ ಹಾಕಿದ್ದಾರೆ.
ಈ ವರ್ಷದ ಏಪ್ರಿಲ್ ನಲ್ಲಿ ಚಂದ್ರಚೂಡ್ ಅವರು ಈ ಬಗ್ಗೆ ವಿವರವಾಗಿ ತನ್ನ ಅಭಿಪ್ರಾಯವನ್ನು ಪಾರ್ಲಿಮೆಂಟರಿ ಪ್ಯಾನೆಲ್ ಗೆ ತಿಳಿಸಿದ್ದಾರೆ.
ಸ್ವತಂತ್ರ ಮತ್ತು ನ್ಯಾಯಯುತ ಮತದಾನ ನಡೆಯುವುದು ಸಂವಿಧಾನದ ಮೂಲಭೂತ ಅಂಶಗಳಲ್ಲಿ ಒಂದಾಗಿದೆ ಎಂದು ಅವರು ತಮ್ಮ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ. ಇದೇ ವೇಳೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಚುನಾವಣೆಯನ್ನು ಜನರು ಪ್ರತ್ಯೇಕವಾಗಿ ಪರಿಗಣಿಸುತ್ತಿದ್ದು ಅವರು ಬೇರೆ ಬೇರೆ ರೀತಿಯಲ್ಲಿ ಮತದಾನ ಮಾಡುತ್ತಾರೆ ಎಂಬುದನ್ನು ಅವರು ತಳ್ಳಿ ಹಾಕಿದ್ದಾರೆ.












