ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ.11: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ (ಜೆಎನ್ಯು) ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಹೊಡೆದದ್ದು ತಾವೇ ಎಂದು ಎಬಿವಿಪಿ ಕಾರ್ಯಕರ್ತರು ಹೇಳಿದ್ದಾರೆ. ದಾಳಿಗೆ ಪೊಲೀಸರು ಸಹಾಯ ಮಾಡಿದ್ದಾರೆ ಎಂದು ಇಂಡಿಯ ಟುಡೆ ಚ್ಯಾನೆಲ್ ನಡೆಸಿದ ರಹಸ್ಯ ಕ್ಯಾಮರಾ ಕಾರ್ಯಾಚರಣೆಯಲ್ಲಿ ಎಬಿವಿಪಿ ಕಾರ್ಯಕರ್ತರು ಹೇಳುವುದು ದಾಖಲಾಗಿದೆ. ಕ್ಯಾಂಪಸ್ ಮತ್ತು ಬೀದಿ ದೀಪಗಳನ್ನು ಆರಿಸಿದ್ದು ಮತ್ತು ದಾಂಧಲೆಗೆ ನೆರವು ನೀಡಿದ್ದು ದಿಲ್ಲಿ ಪೊಲೀಸರು. ಎಡ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲು ಕ್ಯಾಂಪಸ್ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಪ್ರೋತ್ಸಾಹಿಸಿದರು ಎಂದು ಅಕ್ಷತ್ ಎಂಬ ವಿದ್ಯಾರ್ಥಿ ಹೇಳಿದ್ದಾನೆ.
ಅವರಿಗೆ ಹೊಡೆಯಿರಿ ಎಂದು ಹೇಳಿದ್ದು ಸುರಕ್ಷೆಯ ಹೊಣೆಯಿದ್ದ ಅಧಿಕಾರಿಯಾಗಿದ್ದಾರೆ, ಹೊರಗಿನವರು ಕೂಡ ದುಷ್ಕರ್ಮಿ ತಂಡದಲ್ಲಿದ್ದರು. ಹಲ್ಲೆ ನಡೆಸುವಾಗ ಪೊಲೀಸರು ಕ್ಯಾಂಪಸ್ನೊಳಗಿದ್ದರು. ಪೆರಿಯಾರ್ ಹಾಸ್ಟೆಲ್ನಲ್ಲಿ ಒಬ್ಬ ವಿದ್ಯಾರ್ಥಿ ಗಾಯಗೊಂಡಾಗ ತಾನೆ ಪೊಲೀಸರಿಗೆ ಕರೆ ಮಾಡಿದ್ದೆ ಎಂದು ಜೆಎನ್ಯು ಪ್ರಥಮ ವರ್ಷದ ಫ್ರಂಚ್ ಪದವಿ ವಿದ್ಯಾರ್ಥಿಯಾದ ಅಕ್ಷತ್ ಹೇಳಿದ್ದಾನೆ. ಕ್ಯಾಂಪಸ್ನೊಳಗೆ ನುಗ್ಗಿದ ತಂಡದಲ್ಲಿ 20 ಎಬಿವಿಪಿಯವರು ಮತ್ತು ಹೊರಗಿನವರು ಇದ್ದರು.
ಜೆಎನ್ಯುನಲ್ಲಿ ರವಿವಾರ ನಡೆದ ದಾಳಿಗೆ ನಾನು ಹೆಮ್ಮೆ ಪಡುತ್ತೇನೆ ಎಂದು ಎಬಿವಿಪಿ ಕಾರ್ಯಕರ್ತ ರೋಹಿತ್ ಶಾ ವೀಡಿಯೊದಲ್ಲಿ ಹೇಳುತ್ತಿದ್ದಾನೆ. ದುಷ್ಕರ್ಮಿಗಳನ್ನು ತಡೆಯಲು ಬಂದ ಐಷಿ ಘೋಷ್ರ ಚಿತ್ರವನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿ ದಿಲ್ಲಿ ಪೊಲೀಸ್ ಹೊರಡಿಸಿದ ಗಂಟೆಗಳೊಳಗೆ ರಹಸ್ಯ ಕ್ಯಾಮರಾದ ವಿವರ ಬಹಿರಂಗವಾಗಿದೆ.












