ದೀಪಿಕಾರ ಮೌನ ಹೋರಾಟ ಸ್ಫೂರ್ತಿ ತಂದಿದೆ- ರಘುರಾಂ ರಾಜನ್

0
1195

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ.11: ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ಮೌನ ಹೋರಾಟ, ಒತ್ತಡಗಳ ನಡುವೆ ಚುನಾವಣಾ ಆಯೋಗದಲ್ಲಿ ಆಯುಕ್ತರಾದ ಆಶೋಕ್ ಲವಾಸ ಹೊಣೆ ನಿರ್ವಹಿಸಿದ್ದು ಸ್ಫೂರ್ತಿ ತರುವಂತಹದ್ದು ಎಂದು ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಹೇಳಿದರು. ಕೆಲವು ವ್ಯಕ್ತಿಗಳು, ಸತ್ಯ, ಸ್ವಾತಂತ್ರ್ಯ, ನ್ಯಾಯವನ್ನು ಕೇವಲ ಬಾಯಿ ಮಾತಿಗೆ ಮಾತ್ರ ಸೀಮಿತವಲ್ಲ ಎಂದು ಸಾಬೀತುಪಡಿಸಿದ್ದಾರೆ ಎಂದು ಅವರು ಅಭಿಪ್ರಾಯಿಸಿದರು. ಜೆಎನ್‍ಯು ಯುನಿವರ್ಸಿಟಿಯಲ್ಲಿ ಗಂಟೆಗಟ್ಟಲೆ ದಾಂಧಲೆ ನಡೆದರೂ ಪೊಲೀಸರ ತಡೆದಿಲ್ಲ. ಇದು ಆತಂಕದ ವಿಚಾರವಾಗಿದೆ. ಜೆಎನ್‍ಯು ಸಂದರ್ಶನದಿಂದಾಗಿ ದೀಪಿಕಾ ಬೊಕ್ಕೆಗಳನ್ನು ಮತ್ತು ಕಲ್ಲುಗಳನ್ನು ಪಡೆದುಕೊಂಡರು. ಅವರ ಹೊಸ ಸಿನೆಮಾ ಚಪಾಕ್ ವಿರುದ್ಧ ಪ್ರಚಾರವೂ ನಡೆಯಿತು. ಆದರೆ ಸತ್ಯದೊಂದಿಗೆ ಅವರು ನಿಂತದ್ದು ಸ್ಫೂರ್ತಿ ನೀಡುವಂತಹದ್ದು ಎಂದು ರಘುರಾಂ ರಾಜನ್ ಹೇಳಿದರು.

ವಿವಿಧ ವಿಶ್ವಾಸಗಳಿರುವ ಯುವಕರು ಒಂದು ಗೂಡಿ ರಾಷ್ಟ್ರಧ್ವಜದ ಅಡಿಯಲ್ಲಿ ಮಾರ್ಚ್ ಮಾಡುವುದು ಈಗ ಕಾಣುತ್ತಿದೆ. ರಾಜಕೀಯ ನಾಯಕರು ಸ್ವಂತ ಲಾಭಕ್ಕಾಗಿ ಸೃಷ್ಟಿಸಿದ ವಿಭಜನೆಗಳನ್ನು ಅವರ ತಿರಸ್ಕರಿಸಿದರು. ಇದು ನಮ್ಮ ಸಂವಿಧಾನದ ಶಕ್ತಿಯಾಗಿದೆ ಎಂದು ರಘರಾಂರಾಜನ್ ಹೇಳಿದರು.