5.53 ಕೋಟಿ ರೂ.ಸಾಲ: ನಟ ವಿಜಯ್‍ಕಾಂತ್‍ ರ ಕಾಲೇಜು, ಮನೆ ಏಲಂಗೆ

0
542

ಚೆನ್ನೈ, ಜೂ.22: ಕೋಟ್ಯಂತರ ರೂಪಾಯಿ ಸಾಲವನ್ನು ಪಾವತಿಸದೆ ನಟ, ಡಿಎಂಡಿಕೆ ಅಧ್ಯಕ್ಷ ವಿಜಯ್‍ಕಾಂತ್‍ರ ಆಸ್ತಿ ಏಲಂಗೆ ಭಾರತದ ಓವರ್ಸಿಸ್ ಬ್ಯಾಂಕ್ ಕ್ರಮ ಆರಂಭಿಸಿದೆ. ಚೆಂಗಲ್‍ಪೆಟ್ ಮಾಮಂಡೂರಿನಲ್ಲಿನ ಅಂಡಾಲ್ ಅಳಂಗರ್ ಇಂಜಿನಿಯರಿಂಗ್ ಕಾಲೇಜು ಹೆಸರಿನಲ್ಲಿ ಚೆನ್ನೈ ಮೌಂಟ್ ರೋಡ್ ಬ್ಯಾಂಕ್ ಶಾಖೆಯಿಂದ ವಿಜಯ್‍ಕಾಂತ್ ಸಾಲ ಪಡೆದಿದ್ದರು. ಇದಕ್ಕೆ ವಿಜಯ್‍ಕಾಂತ್ ಮತ್ತು ಪತ್ನಿಯ ಹೆಸರಿನಲ್ಲಿದ್ದ ಮೊರು ಮನೆಗಳನ್ನು ಜಾಮೀನು ನೀಡಲಾಗಿತ್ತು.

ಬಡ್ಡಿ ಸಹಿತ 5.53 ಕೋಟಿ ರೂಪಾಯಿ ಸಾಲ ಪಾವತಿಸಲು ಬಾಕಿಯಿದ್ದು ಈಡಾಗಿಟ್ಟ ಆಸ್ತಿಗಳನ್ನು ಜುಲೈ 26ಕ್ಕೆ ಏಲಂ ಮಾಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ. ಒಂದು ದಶಕಗಳ ಕಾಲ ತಮಿಳ್ನಾಡು ರಾಜಕೀಯದಲ್ಲಿ ವೀರಾಜಮಾನರಾಗಿದ್ದ ವಿಜಯ್‍ಕಾಂತ್ ಅನಾರೋಗ್ಯದಿಂದಾಗಿ ಸಾರ್ವಜನಿಕ ಕ್ಷೇತ್ರದಿಂದ ಇತ್ತೀಚೆಗೆ ದೂರವುಳಿದಿದ್ದಾರೆ. ಪತ್ನಿ ಪ್ರೇಮಲತಾ ಪಾರ್ಟಿಗೆ ನೇತೃತ್ವ ನೀಡುತ್ತಿದ್ದಾರೆ. ಏಲಂ ಮಾಡುವ ಬ್ಯಾಂಕಿನ ಕ್ರಮವನ್ನು ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು ಅವರು ತಿಳಿಸಿದ್ದಾರೆ.