ಕಪ್ಪು ಪಟ್ಟಿಗೆ ಸೇರ್ಪಡೆಗೊಳ್ಳುವ ಭೀತಿಯಲ್ಲಿ ಪಾಕ್

0
1160

ಹೊಸದಿಲ್ಲಿ, ಜೂ. 22: ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಸಿಗದಂತೆ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕೆಂದು ಭಾರತ ಸೂಚಿಸಿದೆ. ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಲಭಿಸುವುದನ್ನು ತಡೆಯಲು ಕೆಲಸ ಮಾಡುತ್ತಿರುವ ಜಾಗತಿಕ ಸಂಸ್ಥೆ ಪೈನಾನ್ಶಿಯಲ್ ಆಕ್ಷನ್ ಪೋರ್ಸ್‍ನ ನಿರ್ದೇಶನಗಳನ್ನು ಸಮಯಬದ್ಧವಾಗಿ ಸೆಪ್ಟಂಬರ್ ಗಿಂತ ಮೊದಲು ಪೂರ್ತಿಗೊಳಿಸಬೇಕೆಂದು ಭಾರತ ಆಗ್ರಹಿಸಿದೆ. ಈ ಕುರಿತು ಸರಿಯಾದ ಕ್ರಮಗಳು ಸ್ವೀಕರಿಸದಿದ್ದರೆ ಕಠಿಣ ಪ್ರತ್ಯಾಘಾತಗಳನ್ನು ಎದುರಿಸಲು ತಯಾರಾಗಬೇಕೆಂದು ಪಾಕಿಸ್ತಾನಕ್ಕೆ ಟಾಸ್ಕ್ ಪೋಸ್ ಸೂಚಿಸಿದ್ದನ್ನು ಭಾರತ ಸ್ವಾಗತಿಸಿದೆ. ಪಾಕಿಸ್ತಾನ ಪಾರದರ್ಶಕವಾದ ಕ್ರಮ ಕೈಗೊಳ್ಳಬೇಕೆಂದು ಭಾರತದ ವಿದೇಶ ವಕ್ತಾರ ರವೀಶ್ ಕುಮಾರ್ ಹೇಳಿದರು. ಅಕ್ಟೋಬರ್ ಮೊದಲು ಭಯೋತ್ಪಾದಕರಿಗೆ ಹಣ ಸಿಗದಂತೆ ಮಾಡದಿದ್ದರೆ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಟಾಸ್ಕ್ ಪೋಸ್ ಮುನ್ನೆಚ್ಚರಿಕೆ ನೀಡಿದೆ. ಕಪ್ಪುಪಟ್ಟಿಗೆ ಸೇರ್ಪಡೆಗೊಂಡರೆ ಪಾಕಿಸ್ತಾನಕ್ಕೆ ಜಾಗತಿಕ ಆರ್ಥಿಕ ನೆರವು ಪಡೆಯಲು ಕಷ್ಟವಾಬಹುದು.