ಎಪ್ರಿಲ್ ಒಂದರಿಂದ ವಿಮಾನ ಟಿಕೆಟ್ ದರ ಹೆಚ್ಚಳ

0
588

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮುಂದಿನ ಎಪ್ರಿಲ್ ಒಂದರಿಂದ ವಿಮಾನ ಯಾತ್ರಿಕರಿಗೆ ಟಿಕೆಟ್ ಹೆಚ್ಚಳದ ಬಿಸಿ ಮುಟ್ಟಲಿದೆ. ಡೈರಕ್ಟರೇಟ್ ಜನರಲ್ ಆಫ್ ಸಿವಿ ಎವಿಯೇಶನ್, ವಿಮಾನ ಸುರಕ್ಷ ಶುಲ್ಕ ಹೆಚ್ಚಿಸಿದ್ದು. ಈ ಕಾರಣವಾಗಿ ಅಂತಾರಾಷ್ಟ್ರೀಯ ಮತ್ತು ದೇಶದೊಳಗಿನ ವಿಮಾನ ಯಾನದ ಟಿಕೆಟ್ ದರ ಏರಿಕೆಯಾಗಲಿದೆ.

ದೇಶದೊಳಗಿನ ಡೊಮಸ್ಟಿಕ್ ಪ್ರಯಾಣಕ್ಕೆ 200 ರೂ., ಅಂತಾರಾಷ್ಟ್ರೀಯ ಯಾನಕ್ಕೆ 879 ರೂಪಾಯಿ ಹೆಚ್ಚಳ ಆಗಲಿದೆ ಎಂದು ಡಿಜಿಸಿಎ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಕೊರೊನಾದಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸರ್ವಿಸ್‍ಗಳು ಮೊಟಕುಗೊಂಡು ಕಂಪೆನಿಗಳು ನಷ್ಟ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಿಕರ ಸುರಕ್ಷಾ ಮೊತ್ತ ಹೆಚ್ಚಿಸಿದೆ. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ ಎಫ್) ವಿಮಾನ ಯಾನ, ಏರ್‍ಪೋರ್ಟ್ ಸುರಕ್ಷೆ ವಿಷಯದ ಹೊಣೆಯನ್ನು ನಿರ್ವಹಿಸುತ್ತಿದೆ.

ಎರಡು ವರ್ಷದ ಕೆಳ ವಯೋಮಾನದ ಮಕ್ಕಳು, ರಾಜತಾಂತ್ರಿಕ ಸುರಕ್ಷೆ ಅಧಿಕಾರಿಗಳು, ಕರ್ತವ್ಯ ನಿರತ ಏರ್‍ಲೈನ್ ಕೆಲಸದವರು. ವಿಶ್ವಸಂಸ್ಥೆಯ ಶಾಂತಿ ಸೇನೆಯ ಭಾಗವಾಗಿ ಪ್ರಯಾಣಿಸುವವರಿಗೆ ಈಗಿನ ದರ ಹೆಚ್ಚಳ ಅನ್ವಯವಲ್ಲ ಎನ್ನಲಾಗಿದೆ.