ತಾಲಿಬಾನ್ ಕೇಂದ್ರಗಳ ಮೇಲೆ ಬಾಂಬಿಂಗ್ ತೀವ್ರಗೊಳಿಸಿದ ಅಫ್ಘಾನ್ ಸೇನೆ

0
565

ಸನ್ಮಾರ್ಗ ವಾರ್ತೆ

ಕಾಬೂಲ್: ಅಫ್ಘಾನಿಸ್ತಾದ ಸೇನೆಯು ತಾಲಿಬಾನ್ ಕೇಂದ್ರಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿದ್ದು ಘರ್ಷಣೆ ನಿಯಂತ್ರಣಾತೀತವಾಗಿ ಮುಂದುವರಿಯುತ್ತಿದೆ. ಅಫ್ಘಾನಿಸ್ತಾನದ ಸರಕಾರದ ನಿಯಂತ್ರಣದ ಪ್ರತಿಯೊಂದು ಪ್ರದೇಶವನ್ನು ವಶಪಡಿಸಿಕೊಂಡು ತಾಲಿಬಾನ್ ಮುನ್ನಡೆ ಸಾಧಿಸುವುದನ್ನು ತಡೆಯುವ ಉದ್ದೇಶದಿಂದ ಅಫ್ಘಾನ್ ಸೇನೆ ಬಾಂಬಿಂಗ್ ತೀವ್ರಗೊಳಿಸಿತು.

ಪಶ್ಚಿಮದ ನಗರ ಹೆರಾತ್‍ನಲ್ಲಿ ನೂರಾರು ಕಮಾಂಡೊಗಳನ್ನು ಸೈನ್ಯ ನಿಯೋಜಿಸಿದೆ. ಇಲ್ಲಿ ಆದಿತ್ಯವಾರ ಸೇನೆ ನಡೆಸಿದ ಬಾಂಬಿಂಗ್ ದಾಳಿಯಲ್ಲಿ ಹಲವಾರು ಮಂದಿ ಹತ್ಯೆಯಾಗಿದ್ದರು. ತಾಲಿಬಾನ್ ತೀವ್ರವಾದಿಗಳು ದೇಶವ್ಯಾಪಿ ದಾಳಿ ಮುಂದುವರಿಸುತ್ತಿದ್ದು ಪ್ರಧಾನ ನಗರಗಳಲ್ಲಿ ಅಫ್ಘಾನಿಸ್ತಾನದ ಸೇನೆ ತಾಲಿಬಾನ್ ವಿರುದ್ಧ ಬಾಂಬಿಂಗ್ ನಡೆಸುತ್ತಿದೆ ಎಂದು ಸರಕಾರದ ಮೂಲಗಳು ತಿಳಿಸಿದೆ.

ತಾಲಿಬಾನ್ ಬಾಂಬು ದಾಳಿ ಮಾಡಿದ ವಿಮಾನ ನಿಲ್ದಾಣ ಸಹಿತ ಹೆರಾತ್, ಲಷ್ಕರ್ ಗಾಹ್, ಕಂಧಹಾರ್‌ಗಳಲ್ಲಿ ತಾಲಿಬಾನ್ ದಾಳಿಯ ವಿರುದ್ಧ ಸರಕಾರಿ ಸೇನೆ ಹೋರಾಟ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.