ನಕಲಿ ವ್ಯಾಕ್ಸಿನೇಶನ್ ಸರ್ಟಿಫಿಕೆಟ್, ಕೊರೋನ ತಪಾಸಣೆ ವರದಿ: ಲಕ್ಷಾಂತರ ರೂಪಾಯಿ ದಂಡ

0
688

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಹೇಗಾದರೂ ಮಾಡಿ ಪ್ರಯಾಣಿಸಬೇಕೆಂದಿದ್ದವರಿಗೆ ನಕಲಿ ಸರ್ಟಿಫಿಕೆಟ್ ಒದಗಿಸುವ ತಂಡ ಹಲವು ದೇಶಗಳಲ್ಲಿ ಸಕ್ರಿಯವಾಗಿದ್ದು ಹೀಗೆ ಪಡದುಕೊಂಡ ನಕಲಿ ವ್ಯಾಕ್ಸಿನ್ ಸರ್ಟಿಫಿಕೆಟ್ ಮತ್ತು ಕೊರೋನ ಪರಿಶೀಲನೆ ವರದಿಯೊಂದಿಗೆ ಬಂದ ಪ್ರಯಾಣಿಕರನ್ನು ಕಂಡು ಹುಡುಕಿ ಕೆನಡಾ ಸರಕಾರ ದಂಡ ವಿಧಿಸಿದೆ. ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಇಳಿದ ಅಮೆರಿಕದ ಪ್ರಜೆಗಳಲ್ಲಿ ಗಡಿ ಸೇವಾ ವಿಭಾಗ ನಡೆಸಿದ ತಪಾಸಣೆಯಲ್ಲಿ ಕೊರೋನ ವ್ಯಾಕ್ಸಿನ್ ಸರ್ಟಿಫಿಕೆಟ್, ತಪಾಸಣೆ ವರದಿಗಳು ನಕಲಿ ಎಂದು ಗೊತ್ತಾಗಿದ್ದವು. ನಂತರ ಪ್ರತಿಯೊಬ್ಬರಿಗೆ 16,000 ಡಾಲರ್(11, 88,760 ರೂಪಾಯಿ) ದಂಡವನ್ನು ಕೆನಡಾ ಸರಕಾರ ವಿಧಿಸಿತು.

ಜುಲೈ 18ಕ್ಕೆ ಇಬ್ಬರು ಪ್ರಯಾಣಿಕರು ಹೀಗೆ ಸಿಕ್ಕಿಬಿದ್ದಿದ್ದರು ಎಂದು ಕೆನಡದ ಸಾರ್ವಜನಿಕ ಆರೋಗ್ಯ ವಿಭಾಗ ತಿಳಿಸಿದ್ದು ಕಳೆದ ಜುಲೈಯಲ್ಲಿ ವ್ಯಾಕ್ಸಿನೇಶನ್ ಸರ್ಟಿಫಿಕೆಟ್ ಇರುವವರಿಗೆ ಕೆನಡಾಕ್ಕೆ ಬರಲು ಸರಕಾರ ಅವಕಾಶ ಕಲ್ಪಿಸಿತ್ತು. ವ್ಯಾಕ್ಸಿನ್ ಸ್ವೀಕರಿಸದವರಿಗೆ ವಿವಿಧ ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಮೂರು ದಿವಸ ಸರಕಾರದ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ.