ವರ್ಲ್ಡ್ ಟ್ರೇಡ್ ಸೆಂಟರ್‌‌ನಿಂದ ಕೆಳಗೆ ಹಾರಿ ಮುಂಬೈ ಜಿಎಸ್‍ಟಿ ಸುಪರಿಡೆಂಟೆಂಟ್ ಆತ್ಮಹತ್ಯೆ

0
423

ಮುಂಬೈ,ಮೇ 14: ಮುಂಬೈ ಜಿಎಸ್‍ಟಿ ಸುಪರಿಡೆಂಟೆಂಟ್ ಆಗಿದ್ದ 54 ವರ್ಷದ ಹರೀಂದರ್ ಕಪಾಡಿಯಾ ಕಫೆ ಪರೇಡಿನ ಬಳಿಯಿರುವ ವಲ್ರ್ಡ್ ಟ್ರೇಡ್ ಸೆಂಟರ್ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.ಕಟ್ಟಡದಿಂದ ವ್ಯಕ್ತಿ ಕೆಳಗೆ ಬಿದ್ದ ಕೂಡಲೇ ಸ್ಥಳೀಯರು ಘಟನಾ ಸ್ಥಳಕ್ಕೆ ಓಡಿ ಬಂದರು. ಗಂಭೀರ ಗಾಯಗೊಂಡಿದ್ದ ಕಪಾಡಿಯಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೂ ಅವರ ಜೀವ ರಕ್ಷಿಸಲು ಸಾಧ್ಯವಾಗಿಲ್ಲ. ದುರಂತ ಸಾವು ಎಂದು ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.