ಬಿಜೆಪಿ ವ್ಯಾಕ್ಸಿನ್‍ಗೆ ವಿರೋಧವಿದೆ, ಕೇಂದ್ರ ಸರಕಾರದ ವ್ಯಾಕ್ಸಿನ್ ಸ್ವೀಕರಿಸುತ್ತೇನೆ: ಅಖಿಲೇಶ್ ಯಾದವ್

0
401

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ ಉಚಿತ ಕೊರೊನ ವ್ಯಾಕ್ಸಿನ್ ಘೋಷಿಸಿದ ಬೆನ್ನಿಗೆ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ರಂಗ ಪ್ರವೇಶಿಸಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಮೋದಿ ಇಂತಹದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಅಖಿಲೇಶ್ ಹೇಳಿದರು.

ಸಾರ್ವಜನಿಕರ ಕೋಪ ಪರಿಗಣಿಸಿ ಕೇಂದ್ರ ಸರಕಾರ ವ್ಯಾಕ್ಸಿನೇಶನ್ ರಾಜಕೀಕರಣಗೊಳಿಸುವ ಬದಲು ನಿಯಂತ್ರಣ ವಹಿಸಿಕೊಳ್ಳುವುದನ್ನು ಘೋಷಿಸಿದ್ದಾರೆ. ನಾವೆಲ್ಲರೂ ಬಿಜೆಪಿಯ ವ್ಯಾಕ್ಸಿನ್ ವಿರುದ್ಧ ಇದ್ದೇವೆ. ಆದರೆ ಭಾರತ ಸರಕಾರದ ವ್ಯಾಕ್ಸಿನ್ ಅನ್ನು ನಾವು ಸ್ವಾಗತಿಸುತ್ತೇವೆ. ನಾವೆಲ್ಲರೂ ವ್ಯಾಕ್ಸಿನ್ ಸ್ವೀಕರಿಸುತ್ತೇವೆ. ವ್ಯಾಕ್ಸಿನ್ ಡೋಸ್‍ಗಳ ಕೊರತೆಯಿಂದ ವ್ಯಾಕ್ಸಿನ್ ಪಡೆಯಲಾಗದವರು ಕೂಡ ವ್ಯಾಕ್ಸಿನ್ ತೆಗೆದುಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಟ್ವೀಟ್ ಮಾಡಿದರು.

ಸೋಮವಾರ ಸಂಜೆ ಪ್ರಧಾನಿ ದೇಶವನ್ನು ಉದ್ದೇಶಿಸಿ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ 21 ಜೂನ್‍ನಿಂದ ಉಚಿತ ವ್ಯಾಕ್ಸಿನೇಶನ್ ಮಾಡಲಾಗುವುದೆಂದು ಘೋಷಿಸಿದ್ದಾರೆ.