ಮೂರನೇ ಅಲೆ ಬಂದ ಮೇಲೆ ಶಿಕ್ಷಣದ ವ್ಯವಸ್ಥೆ ಏನಾಗುತ್ತದೆಂದು ಹೇಳಲು ಸಾಧ್ಯವಿಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್

0
458

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ಕೊರೊನದ ಮೂರನೇ ಅಲೆ ಬಂದ ಮೇಲೆ ಏನಾಗುತ್ತದೆಂದು ಹೇಳಲು ಸಾಧ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಕೇರಳ ವಿಧಾನಸಭೆಯಲ್ಲಿ ಹೇಳಿದ್ದಾರೆ. ಡಿಜಿಟಲ್ ವಿದ್ಯಾಭ್ಯಾಸವನ್ನೇ ಮುಂದುವರಿಸಬೇಕಾದೀತು. ಕೊರೊನ ಒಂದನೇ ತರಂಗ ಕಳೆದು2ನೇ ತರಂಗದಲ್ಲಿ ನಾವಿದ್ದೇವೆ. ಮೂರನೇ ತರಂಗ ಬರಲಿದೆ. ಅದಾದ ಮೇಲೆ ಇನ್ನೊಂದು ತರಂಗ ಬರುತ್ತದೆ ನಮಗೆ ಗೊತ್ತಿಲ್ಲ. ಕೊರೊನ ಕೆಲವು ಸಮಯ ನಮ್ಮ ಜೊತೆಗೆ ಇರಲಿದೆ. ಆದ್ದರಿಂದ ಆನ್‍ಲೈನ್ ಶಿಕ್ಷಣ ಪದ್ದತಿಯನ್ನೇ ನೆಚ್ಚಿಕೊಳ್ಳಬೇಕಾದೀತು . ಆದುದರಿಂದ ಡಿಜಿಟಲ್ ಶಿಕ್ಷಣಕ್ಕೆ ಕೊನೆ ಯಾವಾಗ ಎಂದು ಹೇಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಬೆಳೆಯುವ ಮಕ್ಕಳಿಗೆ ಶಿಕ್ಷಣ ಪಂಚಾಗ ಹಾಕಿಕೊಡುವುದು ಮುಖ್ಯವಾಗಿದೆ. ಈ ವಿಷಯದಲ್ಲಿ ಡಿಜಿಟಲ್ ಡಿವೈಡ್ ಉಂಟು ಮಾಡಬಾರದು. ಅದಾಗದಂತೆ ತುಂಬಾ ಎಚ್ಚರಿಕೆ ವಹಿಸಬೇಕು. ಅಗತ್ಯವಾದ ಕಾರ್ಯಗಳಲ್ಲಿ ಸರಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು. ಈಗ ಕೆಲವು ಸಮಸ್ಯೆಳನ್ನು ಎದುರಿಸಬೇಕಾಗುತ್ತಿದೆ. ರಾಜ್ಯದಲ್ಲಿ ಒಂದು ವಿಭಾಗದ ಮಕ್ಕಳಿಗೆ ಈಗಲೂ ಡಿಜಿಟಲ್ ಕಲಿಕೆಗೆ ಅಗತ್ಯವಾದ ಉಪಕರಣಗಳನ್ನು ಖರೀದಿಸುವ ಸಾಮಥ್ರ್ಯವಿಲ್ಲ. ಅವರು ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.

ಪಾಠ ಪುಸ್ತಕಗಳಂತೆ ವಿದ್ಯಾಥಿಗಳಲ್ಲಿ ಡಿಜಿಟಲ್ ಉಪಕರಣಗಳಿರುವುದು ಮುಖ್ಯವಾಗಿದೆ. ಅದನ್ನು ಖರೀದಿಸಲು ಸಾಧ್ಯವಿಲ್ಲದವರಿಗೆ ಸಹಾಯ ಮಾಡಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.