AIPIF ಮೆಸೇಜ್ ಆಫ್ ಹ್ಯೂಮಾನಿಟಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರ

0
334

ಸನ್ಮಾರ್ಗ ವಾರ್ತೆ

ಮಂಗಳೂರು: AIPIF ಮೆಸೇಜ್ ಆಫ್ ಹ್ಯೂಮಾನಿಟಿ(ರಿ) ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ಮಂಗಳೂರಿನ ಇಕ್ರಾ ಅರೇಬಿಕ್ ಸ್ಕೂಲ್‌ನಲ್ಲಿ ರವಿವಾರ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಅಡ್ವೋಕೇಟ್ ಪದ್ಮರಾಜ್, ಪ್ರೊಫೆಸರ್ ಯು.ಟಿ ಇಫ್ತಿಕಾರ್ ಅಲಿ, ಎಂ.ಸಿ.ಸಿ ಬ್ಯಾಂಕ್ ಮುಖ್ಯಸ್ಥ ಅನಿಲ್ ಲೋಬೋ, ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಇಕ್ರಾ ಅರೇಬಿಕ್ ಶಾಲೆಯ ಪ್ರಾಂಶುಪಾಲ ಸಲೀಂ ನಧ್ವಿ, ಎಐಫಿಐಎಫ್ ನೇತಾರ ಫರ್ಹಾನ್ ನದ್ವಿ, ಎಐಫಿಐಎಫ್ ನೇತಾರ ದಾವೂದ್ ಅಹ್ಮದ್ ನಧ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಐಫಿಐಎಫ್ ನೇತಾರ ಫರ್ಹಾನ್ ನದ್ವಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸ್ವಂತ ಧರ್ಮವನ್ನು ಅನುಸರಿಸಿರಿ, ಇತರ ಧರ್ಮವನ್ನು ಗೌರವಿಸಿರಿ. ಸೌಹಾರ್ದತೆಯಿಂದ ಹಾಗೂ ಸಹಬಾಳ್ವೆಯಿಂದ ಮಾನವರು ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಶಾಂತಿಯಿಂದ ಸೌಹಾರ್ದತೆಯಿಂದ ಬದುಕಬೇಕು ಎಂಬ ಸಂದೇಶ ಸಾರಿದರು.

ಪರಿಸರದ ಹಲವು ಉತ್ಸಾಹಿ ಯುವಕರು ರಕ್ತದಾನ ಮಾಡಿ ಸಹಕರಿಸಿದರು. ಸ್ಥಳೀಯ ನಾಗರಿಕರು ಮತ್ತು ಮಂಗಳೂರು AIPIF ಮೆಸೇಜ್ ಆಫ್ ಹ್ಯೂಮಾನಿಟಿ(ರಿ) ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.