ಸನ್ಮಾರ್ಗ ವಾರ್ತೆ
ಕೊಚ್ಚಿ: ಆಯಿಶಾ ಸುಲ್ತಾನರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಚ್ಯಾನೆಲ್ ಚರ್ಚೆಯಲ್ಲಿ ಬಯೊವೆಪನ್ ಎಂದು ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ಕರೆದಿದ್ದರು. ಇದರ ವಿರುದ್ಧ ಪೊಲೀಸರು ಅವರನ್ನು ಮೂರು ಸಲ ತನಿಖೆಗೆ ಗುರಿಪಡಿಸಿದ್ದರು.
ಮೀಡಿಯಾ ವನ್ ಚ್ಯಾನೆಲ್ನಲ್ಲಿ ಚರ್ಚೆಯ ವೇಳೆ ಆಡಳಿತಾಧಿಕಾರಿ ಪ್ರಫುಲ್ ಕೋಡ ಪಟೇಲ್ರ ನೀತಿಯನ್ನು ಖಂಡಿಸಿದ ಆಯಿಶ ಬಯೊವೆಪೆನ್ ಎಂದು ಹೇಳಿದ್ದರು. ಆಡಳಿತಾಧಿಕಾರಿಯ ವಿರುದ್ಧ ವ್ಯಾಪಕ ವಿರೋಧ ಮತ್ತು ಪ್ರತಿಭಟನೆ ಈಗಾಗಲೇ ವ್ಯಕ್ತವಾಗಿದೆ.
ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಅಬ್ದುಲ್ ಕಾದರ್ ಹಾಜಿಯ ದೂರಿನಲ್ಲಿ ಕವರತ್ತಿ ಪೊಲೀಸರು ಅವರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಅದಕ್ಕಿಂತ ಮುಂಚೆ ಅಯಿಶಾರ ಬಂಧನವನ್ನು ಹೈಕೋರ್ಟ್ ತಡೆದಿತ್ತು. ನಿರೀಕ್ಷಣಾ ಜಾಮೀನಿನ ಅರ್ಜಿಯಲ್ಲಿ ತೀರ್ಪನ್ನು ಹೈಕೋರ್ಟು ಮುಂದೂಡಿತ್ತು. ಇದೀಗ ಆಯಿಶಾರಿಗೆ ಕೇರಳ ಹೈಕೋರ್ಟು ಜಾಮೀನು ಅರ್ಜಿ ಮುಂದೂಡಿತ್ತು.












