ಸನ್ಮಾರ್ಗ ವಾರ್ತೆ
ಕೊಚ್ಚಿ.26: ಶಬರಿಮಲೆ ಸಂದರ್ಶನಕ್ಕೆ ಭೂಮಾತಾ ಬ್ರಿಗೇಡ್ನ ನಾಯಕಿ ತೃಪ್ತಿ ದೇಸಾಯಿ ಮತ್ತು ಸಂಗಡಿಗರು ಶಬರಿಮಲೆಗೆ ಹೊರಟು ಬಂದಿದ್ದಾರೆ. ಬೆಳಗ್ಗೆ 5:45ಕ್ಕೆ ನೆಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತೃಪ್ತಿ ಮತ್ತು ಸಂಗಡಿಗರು ಸಂರಕ್ಷಣೆ ಕೋರಿ ಕಮಿಶನರ್ ಕಚೇರಿಗೆ ಬಂದರು. ಪೊಲೀಸರು ತೃಪ್ತಿಯವರೊಡನೆ ಚರ್ಚಿಸಿದ್ದರು.
ಕಳೆದ ವರ್ಷ ಶಬರಿಮಲೆ ದರ್ಶನ ಪಡೆದ ಬಿಂದು ಅಮ್ಮಾಣಿ, ತೃಪ್ತಿಯ ಜೊತೆಗಿದ್ದಾರೆ. ಯುವತಿಯರಿಗೆ ಹೋಗಲು ಸುಪ್ರೀಂ ಕೋರ್ಟು ತೀರ್ಪಿನಲ್ಲಿ ಅವಕಾಶ ಮಾಡಿಕೊಟ್ಟಿತ್ತು. ಶಬರಿಮಲೆಗೆ ಹೋಗುವೆ ಎಂದು ತೃಪ್ತಿ ಮಾಧ್ಯಮಗಳಿಗೆ ತಿಳಿಸಿದರು. ಇದು ಗೊತ್ತಾಗಿ ಬಿಜೆಪಿ ನಾಯಕ ಸಿಜಿ ರಾಜಗೋಪಾಲರ ನೇತೃತ್ವದಲ್ಲಿ ಕಾರ್ಯಕರ್ತರು ಕಮಿಶನರ್ ಕಚೇರಿ ಮುಂದೆ ಒಟ್ಟುಗೂಡಿದರು. ಬಿಂದು ಅಮ್ಮಾನಿ ನಡುವೆ ಮಾತಿನ ಕದನ ನಡೆಯಿತು.
ಪ್ರತಿಭಟನಕಾರರಾದ ಬಿಜೆಪಿಯವರು ಬಿಂದು ಅಮ್ಮಾನಿ ಮೇಲೆ ಮೆಣಸಿನ ಹುಡಿ ಎರಚಿದ್ದಾರೆ. ಇದೇ ವೇಳೆ ಪಾರ್ಟಿ ಕಾರ್ಯಕರ್ತರು ಬಿಂದು ಅಮ್ಮಾನಿಯವನರನ್ನು ತಡೆದಿಲ್ಲ. ಮೆಣಸಿನ ಹುಡಿ ಎರಚಿದ್ದು ಬರೇ ಆರೋಪ ಎಂದು ಬಿಜೆಪಿ ನಾಯಕರು ಹೇಳಿದರು. ಕೋಟ್ಟಯಂ ಮೂಲಕ ಶಬರಿ ಮಲೆಗೆ ತೆರಳುವುದು ತೃಪ್ತಿ ಮತ್ತು ಸಂಗಡಿಗರ ಉದ್ದೇಶವಾಗಿದೆ.
ತೃಪ್ತಿ ದೇಸಾಯಿ ಮತ್ತು ಸಂಗಡಿಗರಿಗೆ ಸಂರಕ್ಷಣೆ ನೀಡುವ ವಿಚಾರದಲ್ಲಿ ಪೊಲೀಸರು ಹಿಂದೆ ಸರಿದಿದ್ದಾರೆ. ಶಬರಿಮಲೆ ದರ್ಶನ ಮಾಡದೆ ಮರಳಿ ಹೋಗಬೇಕೆಂದು ಪೊಲೀಸರು ತೃಪ್ತಿಗೆ ತೋರಿಸಿದರು. ಕೊಚ್ಚಿ ಡಿಸಿಪಿ ಸಂರಕ್ಷಣೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಪೊಲೀಸರು ತೃಪ್ತಿ ದೇಸಾಯಿಗೆ ಸಂರಕ್ಷಣೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕೋರ್ಟಿನ ತೀರ್ಪು ತೋರಿಸಿದರೆ ದರ್ಶನಕ್ಕೆ ಅನುಮತಿ ನೀಡಲಾಗುವುದು ಎಂದು ಪೊಲೀಸರು ಹೇಳಿದರು. ಈ ನಡುವೆ ತೃಪ್ತಿ ಡಿಐಜಿಯವರನ್ನು ಭೇಟಿಯಾಗಲು ತೃಪ್ತಿ ನಿರ್ಧರಿಸಿದ್ದಾರೆ. ಸಂರಕ್ಷಣೆ ನೀಡಲಾಗದು ಎಂದಿದ್ದನ್ನು ಡಿಐಜಿಗೆ ನೇರವಾಗಿ ಭೇಟಿ ಮಾಡಿ ತಿಳಿಸುವೆ ಎಂದು ತೃಪ್ತಿ ಹೇಳಿದರು.
ಕಳೆದ ಸಲ ಸುಪ್ರೀಂಕೋರ್ಟು ತೀರ್ಪು ಬಂದ ಬೆನ್ನಿಗೆ ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶಿಸಲು ಹೊರಟು ಬಂದಿದ್ದರು. ಶಬರಿಮಲೆ ಕ್ರಿಯಾ ಸಮಿತಿ ಮುಂತಾದ ಪ್ರತಿಭಟನಾಕಾರರ ವಿರೋಧದ ದೆಸೆಯಿಂದ ಅವರನ್ನು ಮರಳಿ ಕಳುಹಿಸಲಾಗಿತ್ತು.












