ಸನ್ಮಾರ್ಗ ವಾರ್ತೆ
ಕಲ್ಲಿಕೋಟೆ,ಸೆ.10: ಸಾಮಾಜಿಕ ನ್ಯಾಯ ನಿರಾಕರಿಸಲ್ಪಟ್ಟು ವಿಚಾರಣಾ ಕೈದಿಯಾಗಿರುವ ಸಾವಿರಾರು ಮಂದಿಗೆ ನ್ಯಾಯ ಲಭಿಸುವಂತಾಗಲು ಯುಎಪಿಎ ಕಾನೂನು ರದ್ದು ಪಡಿಸುವವರೆಗೆ ಜನತಾ ಹೋರಾಟ ನಡೆಯಬೇಕಾಗಿದೆ ಎಂದು ಕೇರಳ ಸಾಲಿಡಾರಿಟಿ ಅಧ್ಯಕ್ಷ ನಹಾಸ್ ಮಾಳ ಹೇಳಿದರು.
ಕಲ್ಲಿಕೋಟೆಯ ಮಾವೋವಾದಿ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ, ಯುಎಪಿಎ ಅಡಿಯಲ್ಲಿ ವಿಚಾರಣಾ ಕೈದಿಗಳಾದ ಅಲನ್ ತಾಹರಿಗೆ ಜಾಮೀನು ಲಭಿಸಿದೆ. ಪ್ರಕರಣದಲ್ಲಿ ಆರಂಭದಿಂದಲೇ ಪೊಲೀಸರು ಮತ್ತು ರಾಜ್ಯ ಸರಕಾರ ಎನ್ಐಎಗೆ ಕೇಸು ಹಸ್ತಾಂತರಿಸುವ ಪ್ರಯತ್ನ ನಡೆಸಿತು. ನಂತರ ಎನ್ಐಎ ಮಾಫಿಸಾಕ್ಷಿ ಸೃಷ್ಟಿಸುವ ಪ್ರಯತ್ನವನ್ನೂ ನಡೆಸಲಾಯಿತು. ಪ್ರಕರಣದ ಆರಂಭದಿಂದಲೇ ಕುಟುಂಬ, ಮಾನವಹಕ್ಕು ಕಾರ್ಯಕರ್ತರು ಹೋರಾಟಗಾರರು, ಸಂಘಟನೆಗಳು ನಡೆಸಿದ ಪ್ರಯತ್ನದಿಂದ ಜಾಮೀನು ಲಭಿಸಿತು. ದೇಶದಲ್ಲಿ ಹೇರಳ ಯುವಕರು ಇಂದಿಗೂ ಯುಎಪಿಎಯಡಿಯಲ್ಲಿ ಪೀಡಿಸಲ್ಪಡುತ್ತಿದ್ದಾರೆ ಎಂದು ಅವರು ಹೇಳಿದರು.
ಆರೋಗ್ಯ ಸಮಸ್ಯೆ ಎದುರಿಸುವ, ಅನ್ಯಾಯವಾಗಿ ಜೈಲಿನಲ್ಲಿಡಲಾದ ಮಅದನಿ, ಝಕರಿಯಾರಂತಹ ಬಹಳಷ್ಟೂ ಜನರು ಯುಎಪಿಯಡಿಯಲ್ಲಿ ವಿಚಾರಣಾ ಕೈದಿಗಳಾಗಿ ಜೈಲಿನೊಳಗಿದ್ದಾರೆ. ಈ ನಿರಪರಾಧಿಗಳನ್ನು ಸ್ವತಂತ್ರರನ್ನಾಗಿಸಬೇಕು. ಅದಕ್ಕೆ ಬೇಕಾದ ಜನತಾ ಹೋರಾಟ ನಡೆಯಬೇಕು.
ಝಕರಿಯರ ತಾಯಿ ಬಿಯ್ಯಾಮ್ಮ, ಸೋಲಿಡಾರಿಟಿ ಯುಎಪಿಎ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಇದಕ್ಕೆ ಅನುಕೂಲಕರವಾದ ಕಾನೂನು ಚಟುವಟಿಕೆಗಳು ಜನಪರವಾಗಿ ನಡೆಯುವ ಅಗತ್ಯವಿದೆ ಎಂದು ನಹಾಸ್ ಮಾಳ ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












