ಪಿಎಫ್‍ಐ ಬೇಟೆ ರಾಜಕೀಯ ಪ್ರೇರಿತ: ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟಿಸ್

0
210

ಸನ್ಮಾರ್ಗ ವಾರ್ತೆ

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಇಂಡಿಯಾ ವಿರುದ್ಧ ಎನ್‍ಐಎ ಮತ್ತು ಇಡಿ ದಾಳಿ ಸಹಿತ ಕಾರ್ಯಾಚರಣೆಗಳು ರಾಜಕೀಯ ಪ್ರೇರಿತವಾಗಿದೆ. ಇದು ಸರಕಾರಿ ಸಂಸ್ಥೆಗಳ ದುರುಪಯೋಗಕ್ಕೆ ಉದಾಹರಣೆಯಾಗಿದೆ ಎಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟಿಸ್ ಆರೋಪಿಸಿದೆ.

ಸಂಘಟನೆಯ ಹಲವು ನಾಯಕರು ಮತ್ತು ಸದಸ್ಯರನ್ನು ಬಂಧಿಸಲಾಗಿದೆ. ನಿರಾಧಾರ ದೂರುಗಳು ಆರೋಪಗಳಲ್ಲಿ ಬೆಂಗಳೂರಿನಲ್ಲಿ ಕ್ರಮಕೈಗೊಂಡಿದ್ದಾರೆ. ಸಮಾಜದ ಹಿಂದುಳಿದವರ, ಅಲ್ಪಸಂಖ್ಯಾತರ, ದಲಿತರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂಬುದು ಪಿಎಫ್‍ಐ ವಿರುದ್ಧ ಇರುವ ಆರೋಪವಾಗಿದೆ. ಪೊಲೀಸ್ ದೌರ್ಜನ್ಯ, ನಕಲಿ ಎನ್‍ಕೌಂಟರ್, ನಿರಪರಾಧಿಗಳ ಅನ್ಯಾಯಯುತ ಜೈಲು‌ ಮುಂತಾದುವುಗಳ ವಿರುದ್ಧ ಪಿಎಫ್‍ಐ ಅಭಿಯಾನ ಹಮ್ಮಿಕೊಂಡಿರುವುದು ಈ ಕ್ರಮಗಳಿಗೆ ಕಾರಣವಾಗಿದೆ ಎಂದು ಅದು ಹೇಳಿದೆ.

ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಸಹಿತ ಹಿಂದುತ್ವ ಸಂಘಟನೆಗಳು ನಡೆಸುತ್ತಿರುವ ಅಕ್ರಮ ಘಟನೆಗಳು ಬಹಿರಂಪಡಿಸುವ ಹಲವು ವಿಷಯಗಳು ವಿವಿಧ ಕೋರ್ಟಿನಲ್ಲಿವೆ. ದೇಶಾದ್ಯಂತ ಸ್ಫೋಟ ನಡೆಸಲು ಬಾಂಬು ನಿರ್ಮಿಸಲು ತರಬೇತಿಯನ್ನು ಆರ್‌ಎಸ್‌ಎಸ್‌‌ನಲ್ಲಿ ಒಳಗೊಂಡವರು ಯತ್ನಿಸುತ್ತಿದ್ದಾರೆ. ಇವುಗಳನ್ನು ಮಾಡಿದ್ದೇವೆ ಎಂದು ಆ ಸಂಘಟನೆಯಲ್ಲಿ ಈ ಹಿಂದೆ ಇದ್ದವರೇ ಬಹಿರಂಗಪಡಿಸಿದ್ದಾರೆ.

ಈ ಪರಿಸ್ಥಿತಿಯಲ್ಲಿ ಪಿಎಫ್‍ಐ ವಿರುದ್ಧ ಕ್ರಮಗಳು ಜರಗುತ್ತಿರುವುದನ್ನು ಹಾಗೂ ಸರಕಾರ ಸಂಸ್ಥೆಗಳ ದುರುಪಯೋಗ ಪಡಿಸುತ್ತಿರುವುದನ್ನು ನಮ್ಮ ಸಂಘಟನೆ ಬಲವಾಗಿ ವಿರೋಧಿಸುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಝಾರಿಯೊ, ಅಧ್ಯಕ್ಷ ಮೈತ್ರೇಯಿ ಕೃಷ್ಣನ್ ಹೇಳಿಕೆ ನೀಡಿದ್ದಾರೆ.