ಗಾಝದಲ್ಲಿ ಇಸ್ರೇಲ್ ಕ್ರೌರ್ಯದ ವಿರುದ್ಧ ಅಮೇರಿಕ ವಿದ್ಯಾರ್ಥಿಗಳ ಆಂದೋಲನ

0
321

ಸನ್ಮಾರ್ಗ ವಾರ್ತೆ

ಪ್ಯಾರಿಸ್ : ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಅಮೆರಿಕದಲ್ಲಿ ಹಬ್ಬಿರುವ ವಿದ್ಯಾರ್ಥಿಗಳ ಪ್ರತಿಭಟನೆ ಇನ್ನಷ್ಟು ದೇಶಗಳಿಗೂ ವ್ಯಾಪಿಸಿದೆ. ಕಳೆದ ದಿನ, ಫ್ರಾನ್ಸ್‌ನ ಪ್ಯಾರಿಸ್ ಇನ್‌ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸ್ಟಡೀಸ್‌ನಲ್ಲಿ ವಿದ್ಯಾರ್ಥಿಗಳು ಪ್ಯಾಲೆಸ್ತೀನ್ ಧ್ವಜಗಳು ಮತ್ತು ಕಾಫಿಯಾಗಳನ್ನು ಧರಿಸಿ ಪ್ರದರ್ಶಿಸಿದರು. ಪ್ಯಾರಿಸ್‌ನ ಸೌಬೊನ್ನೆ ವಿಶ್ವವಿದ್ಯಾನಿಲಯದಲ್ಲೂ ಗಲಭೆಗಳು ಭುಗಿಲೆದ್ದವು. ವಿದ್ಯಾರ್ಥಿಗಳು ಸಂಸ್ಥೆಯ ಪ್ರವೇಶ ದ್ವಾರದಲ್ಲಿ ಅಡಚನೆ ಸೃಷ್ಟಿಸಿದರು.

ಅಕಾಡೆಮಿ ಇಸ್ರೇಲಿನ ಅತಿಕ್ರಮಣವನ್ನು ಖಂಡಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಆಸ್ಟ್ರೇಲಿಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಫೆಲೆಸ್ತೀನಿಗೆ ಬೆಂಬಲ ಸೂಚಿಸಿ ಪ್ರತಿಭಟನೆಗಳು ನಡೆದಿವೆ. ಸಿಡ್ನಿ ವಿಶ್ವವಿದ್ಯಾನಿಲಯ, ಮೆಲ್ಬರ್ನ್ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ಪ್ರಯುಕ್ತ ಹಲವು ಕಾರ್ಯಕ್ರಮಗಳು ನಡೆದಿವೆ. ಇಟಲಿಯ ಸೊಪಿಯನ್ಸ್ ವಿಶ್ವ ವಿದ್ಯಾರ್ಥಿಗಳು ಅನ್ನಸತ್ಯಾಗ್ರಹ ನಡೆಸಿದರು.

ಇಂಗ್ಲೆಂಡಿನ ವಾರ್ವಿಕ್ ವಿಶ್ವವಿದ್ಯಾನಿಲಯ, ಲೆಸ್ಟರ್, ಕೊವೆಂಟ್ರಿ ವಿಶ್ವವಿದ್ಯಾನಿಲಯಗಳಲ್ಲಿ ಸೋಮವಾರ ಫೆಲೆಸ್ತೀನ್ ಧ್ವಜ ಹಿಡಿದು ಪ್ರತಿಭಟನೆ ನಡೆದಿದೆ. ಇಸ್ರೇಲಿಗೆ ಸಹಕರಿಸುವುದು ನಿಲ್ಲಿಸಬೇಕೆಂದು ಆಗ್ರಹಿಸಿ ಕಳೆದ ತಿಂಗಳು ಬ್ರಿಟನ್‍ನ ಲೀಡ್ಸ್ ವಿಶ್ವ ವಿದ್ಯಾನಿಲಯ ವಿದ್ಯಾರ್ಥಿಗಳು ಕಟ್ಟಡಕ್ಕೆ ಮುತ್ತಿಗೆ ಹಾಕಿದ್ದರು. ಇಸ್ರೇಲ್ ಸರಕಾರಕ್ಕೆ ಅತೀ ಹೆಚ್ಚು ಬೆಂಬಲ ನೀಡುವ ದೇಶಗಳಲ್ಲಿ ಇಂಗ್ಲೆಂಡ್ ಕೂಡ ಒಂದು ಆಗಿದೆ.

ಕೊಲೊಂಬಿಯ ಯುನಿವರ್ಸಿಟಿಯಲ್ಲಿ ಎಪ್ರಿಲ್ 22ಕ್ಕೆ 70ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ಸಿನ ಹೊರಗೆ ಶುರುಮಾಡಿದ ಪ್ರತಿಭಟನೆ ತೀವ್ರಗತಿಯಲ್ಲಿ ಹರಡತೊಡಗಿತು. ಪೊಲೀಸರ ಸಹಕಾರದಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದರು. ನೂರಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ವಿದ್ಯಾರ್ಥಿ ಹೋರಾಟಗಳಿಂದಾಗಿ ಶಿಕ್ಷಣ ವಿಧಾನ ಅಸ್ತವ್ಯಸ್ತಗೊಂಡಿದೆ.

ಹಲವು ವಿಶ್ವವಿದ್ಯಾನಿಲಯಗಳು ಆನ್‍ಲೈನ್ ಪಾಠ ಶುರುಮಾಡಿದೆ. ಕೆಲವು ಕಡೆ ಪದವಿ ಪ್ರದಾನ ಕಾರ್ಯಕ್ರಮಗಳನ್ನು ಕೂಡ ಮುಂದೂಡಲಾಗಿದೆ. ಫೆಲೆಸ್ತೀನ್ ಧ್ವಜ ಫೆಲಸ್ತೀನ್ ರಾಷ್ಟ್ರೀಯತೆಯ ಪ್ರತೀಕವಾದ ಕಫಿಯ್ಯ ಅಂದರೆ ಕಪ್ಪು ಬಿಳಿ ಬಟ್ಟೆ ಧರಿಸಿ ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‍ ಗಳು ಫೆಲಸ್ತೀನಿಗೆ ಬೆಂಬಲ ಸಾರಿದರು ಮತ್ತು ಮಾಧ್ಯಮದ ಮಂದಿ ಕೂಡ ಫೆಲೆಸ್ತೀನಿಗೆ ಬೆಂಬಲ ಸೂಚಿಸಿ ರಂಗ ಪ್ರವೇಶಿಸಿದ್ದಾರೆ.

ವಾಷಿಂಗ್ಟನ್ ಡಿಸಿಯ ಜಾರ್ಜ್‍ಟೌನ್ ಯುನಿವರ್ಸಿಟಿಯ ನೂರಾರು ವಿದ್ಯಾಥಿಗಳು ಸಮೀಪದ ಜಾರ್ಜ್ ವಾಷಿಂಗ್ಟನ್ ಯುನಿವರ್ಸಿಟಿಗೆ ಜಾಥ ಮಾಡಿದ್ದಾರೆ. ಪ್ರಥಮ ಅಮೆರಿಕ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಪ್ರತಿಮೆಯ ಹತ್ತಿರದಲ್ಲಿ ಫೆಲೆಸ್ತೀನ್ ಧ್ವಜವನ್ನು ಹಾರಿಸಿದರು.

ವಂಶ ಹತ್ಯೆ ಮತ್ತು ವಸಾಹತು ಶಾಹಿ ನಡೆಸುತ್ತಿರುವ ಇಸ್ರೇಲ್‍ಗೆ ಮತ್ತು ಅಲ್ಲಿನ ಅಕಾಡಮಿಕ್ ವ್ಯವಸ್ಥೆಗಳಿಗೆ ವಿಶ್ವವಿದ್ಯಾನಿಲಯಗಳು ಯಾವುದೇ ಸಹಕಾರ ನೀಡಬಾರದು. ಜಂಟಿ ಕಾರ್ಯಕ್ರಮ ಯೋಜನೆಗಳನ್ನು ಕೈಬಿಡಬೇಕು. ಗಾಝದ ವಂಶಹತ್ಯೆಯನ್ನು ವಿಶ್ವವಿದ್ಯಾನಿಲಯದ ಮುಖ್ಯ ಸ್ಥಾನದಲ್ಲಿರುವವರು ಖಂಡಿಸಬೇಕು. ಸರಕಾರದ ವಿರುದ್ಧ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಬಾರದು. ಅಮಾನತು ಗೊಳಿಸಬಾರದು ಎಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.

LEAVE A REPLY

Please enter your comment!
Please enter your name here