ಗೋವಾ ಚುನಾವಣೆ: ಆಮ್ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಮಿತ್ ಪಾಲೇಕರ್

0
214

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗೋವಾ ವಿಧಾನಸಭೆಯ ಚುನಾವಣೆಯಲ್ಲಿ ವಕೀಲ ಅಮಿತ್ ಪಾಲೇಕರ್ ರನ್ನು ಆಮ್ ಆದ್ಮಿ ಪಾರ್ಟಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಎಎಪಿ ಸಂಯೋಜಕ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದರು.

ಗೋವಾದ ನಲ್ವತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಅವರು ತಿಳಿಸಿದ್ದಾರೆ. ಅಕ್ಟೋಬರಿನಲ್ಲಿ ಅಮಿತ್ ಎಎಪಿ ಸೇರಿದ್ದರು. ಅವರು ಭಂಡಾರಿ ಸಮುದಾಯಕ್ಕೆ ಸೇರಿದ ನಾಯಕನಾಗಿ ಗುರುತಿಸಿಕೊಂಡಿದ್ದು, ಸೇಂಟ್ ಕ್ರೂಸ್ ವಿಧಾನಸಭಾ ಸೀಟಿನಿಂದ ಸ್ಪರ್ಧೆಗಿಳಿದಿದ್ದಾರೆ.

ಹಿಂದುಳಿದ ಭಂಡಾರಿ ಸಮುದಾಯದಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದರು.

ಅಮಿತ್ ಪಾಲೇಕರ್ ಬಿಜೆಪಿ ನಾಯಕ ಹಳೆ ಗೋವಾದ ಯುನೆಸ್ಕೊ ಸಂರಕ್ಷಿತ ಪ್ರದೇಶದಲ್ಲಿ ಕಟ್ಟಿಸಿದ ಬಂಗ್ಲೆಯ ವಿರುದ್ಧ ಹೋರಾಟ ನಡೆಸಿ ಖ್ಯಾತಿಯನ್ನು ಪಡೆದಿದ್ದರು.

ರವಿನಾಯಕ್ ಎಂಬವರು ಕೂಡ ಈ ಸಮುದಾಯಕ್ಕೆ ಸೇರಿದವರು.‌ ಭಂಡಾರಿಯವರ ಜನಸಂಖ್ಯೆ ಶೇ. 35ರಷ್ಟು ಗೋವಾದಲ್ಲಿದೆ. ಪ್ರತಿಮಾ ಕುಟಿಂಞ, ವಾಲ್ಮಿಕಿ ನಾಯಿಕ್ ಹೆಸರೂ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಕೇಳಿ ಬಂದಿತ್ತು. ಒಂದು ವೇಳೆ ಸರಕಾರ ರಚಿಸಲ್ಪಟ್ಟರೆ ಪ್ರತಿಮಾ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಂಸದ ಭಗವಂತ ಮಾನ್‍ರನ್ನು ಆಮ್ ಆದ್ಮಿ ಮಂಗಳವಾರ ಘೋಷಿಸಿತ್ತು.