ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಡಿ.3: ರೈತರ ಪ್ರತಿಭಟನೆ ತೀವ್ರಗೊಂಡಿರುವುದರ ನಡುವೆ ಕೇಂದ್ರ ಗೃಹ ಸಚಿವ ಮತ್ತು ಪಂಜಾಬ್ ಮುಖ್ಯಮಂತ್ರಿ ನಡುವೆ ಭೇಟಿ ನಡೆಯಲಿದೆ ಎಂದು ವರದಿಯಾಗಿದೆ. ಇಂದು ರೈತರೊಂದಿಗೆ ನಡೆಯುವ ಚರ್ಚೆಗೆ ಮುಂಚಿತವಾಗಿ ಗೃಹ ಸಚಿವ ಅಮಿತ್ ಶಾ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ರನ್ನು ಸಂದರ್ಶಿಸಲಿದ್ದಾರೆ.
ರೈತರ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅವರ ಬೇಡಿಕೆ ಪರಿಗಣಿಸಬೇಕೆಂದು ಶಾರೊಂದಿಗೆ ಆಗ್ರಹಿಸುವೆ ಎಂದು ಅಮರೀಂದರ್ ಸಿಂಗ್ ಹೇಳಿದರು. ಕೃಷಿ ಕಾನೂನು ಹಿಂಪಡೆಯುಬೇಕೆಂದು ಭೇಟಿಯ ವೇಳೆ ಪುನರುಚ್ಚರಿಸುವೆ ಎಂದು ಕ್ಯಾಪ್ಟನ್ ಹೇಳಿದ್ದಾರೆ. ಇಂದಿನ ಚರ್ಚೆಯಲ್ಲಿ 35 ರೈತ ಸಂಘಟನೆಗಳು ಭಾಗಿಯಾಗಲಿವೆ. ಮೊನ್ನೆ ರೈತರೊಂದಿಗೆ ಚರ್ಚೆಯು ವಿಫಲವಾಗಿತ್ತು. ನಂತರ ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿತ್ತು.
ಸಮಸ್ಯೆ ಅಧ್ಯಯನಕ್ಕೆ ತಜ್ಞ ಸಮಿತಿಯನ್ನು ನಿಯೋಜಿಸಲಾಗುವುದು ಎಂದು ಕೇಂದ್ರ ಸರಕಾರ ಪ್ರಸ್ತಾವ ಮುಂದಿಟ್ಟಿತ್ತು. ತಜ್ಞ ಸಮಿತಿಯನ್ನು ನಿಯೋಜಿಸಬೇಕಾದ ಸಮಯ ಇದಲ್ಲ ಎಂದು ರೈತರು ಹೇಳಿದರು. ಹೊಸ ಕೃಷಿ ಕಾನೂನು ರದ್ದು ಪಡಿಸಲು ಪಾರ್ಲಿಮೆಂಟಿನ ವಿಶೇಷ ಅಧಿವೇಶನ ನಡೆಸಬೇಕು. ನಮ್ಮ ಬೇಡಿಕೆ ಒಪ್ಪದಿದ್ದರೇ ರಾಜಧಾನಿಯ ಇತರ ರಸ್ತೆಗಳಲ್ಲಿಯೂ ತಡೆ ಒಡ್ಡಲಾಗುವುದು ಎಂದು ಅವರು ಹೇಳಿದರು. ಪಂಜಾಬಿನ 31 ರೈತ ಸಂಘಟನೆಗಳು, ಹರಿಯಾಣದ ಎರಡು ಸಂಘಟನೆಗಳು ಕಿಸಾನ್ ಸಂಘರ್ಷ ಸಮಿತಿಯಿಂದ ಇಬ್ಬರು ಒಟ್ಟು 35 ಮಂದಿ ಇಂದಿನ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.












