ಸನ್ಮಾರ್ಗ ವಾರ್ತೆ
ತ್ರಿಪುರ: ಮನೆಯಲ್ಲಿ ಟ್ಯೂಷನ್ ತರಗತಿಗಳನ್ನು ಪಡೆಯಲು ಹೋಗುತ್ತಿದ್ದ ಒಂಬತ್ತು ವರ್ಷದ ಬಾಲಕನಿಗೆ 23 ವರ್ಷದ ಖಾಸಗಿ ಬೋಧಕ ಲೈಂಗಿಕ ಕಿರುಕುಳ ನೀಡಿದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಖಾಸಗಿ ಟ್ಯೂಷನ್ ಬೋಧಕ ಇಂದ್ರ ಘೋಷ್ ಎಂಬಾತನು ಲೈಂಗಿಕ ಕಿರುಕುಳ ನೀಡಿರುವುದು ಹತ್ತು ದಿನಗಳ ಬಳಿಕ ಬಾಲಕನು ತಿಳಿಸಿದ್ದು ಬಾಲಕನ ತಾಯಿ ನೀಡಿದ ಹೇಳಿಕೆಯ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಯಾರಿಗಾದರೂ ಹೇಳಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೋಧಕ ಬೆದರಿಕೆಯೊಡ್ಡಿದ್ದನೆಂದು ಆರೋಪಿಸಲಾಗಿದೆ. ಈ ನಡುವೆ, “ಆರೋಪಿ ತಲೆಮರೆಸಿಕೊಂಡಿದ್ದು, ನಾವು ಆತನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಸಹಾಯವಾಣಿ ವಿಭಾಗದಿಂದ ತಂಡವು ಬಾಲಕನ ಮನೆಗೆ ಭೇಟಿ ನೀಡಿದೆ ಎಂಬುದಾಗಿ ವರದಿಯಾಗಿದೆ.












