ರೈತ ಪ್ರತಿಭಟನೆ: ಹಿರಿಯ ಬಿಜೆಪಿ ನಾಯಕರ ನೇತೃತ್ವದಲ್ಲಿ ಮಧ್ಯರಾತ್ರೆ ಚರ್ಚೆ

0
371

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿ ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ನಾಯಕರು ಮಧ್ಯರಾತ್ರೆ ಸಭೆ ಸೇರಿದರೆಂದು ವರದಿಯಾಗಿದೆ. ಗೃಹ ಸಚಿವ ಅಮಿತ್ ಶಾ, ಸಚಿವರಾದ ರಾಜನಾಥ ಸಿಂಗ್, ನರೇಂದ್ರ ಸಿಂಗ್ ಗೋಮರ್ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡರ ಮನೆಯಲ್ಲಿ ಸಭೆ ನಡೆಸಿದ್ದಾರೆ.

ಕೇಂದ್ರ ಸರಕಾರ ಹೇಳುವ ಸ್ಥಳದಲ್ಲಿ ರೈತರು ಪ್ರತಿಭಟಿಸಬೇಕೆಂಬ ಮಾತನ್ನು ರೈತರು ತಿರಸ್ಕರಿಸಿದ ನಂತರ ತುರ್ತು ಸಭೆ ಸೇರಲಾಗಿದೆ. ಎರಡು ಗಂಟೆಗಳ ಕಾಲ ಸಭೆ ನಡೆಯಿತು.

ರೈತ ಹೋರಾಟವಲ್ಲದೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ಹರಿಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ನಡುವಿನ ವಾಗ್ವಾದ ಕೂಡ ಬಿಜೆಪಿ ನಾಯಕರು ಚರ್ಚಿಸಿದರು. ಡಿಸೆಂಬರ್ ಮೂರಕ್ಕೆ ರೈತರೊಂದಿಗೆ ಚರ್ಚೆನಡೆಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿತ್ತು. ಅದರೆ ಅದಕ್ಕಿಂತ ಮುಂಚೆ ಸಭೆ ನಡೆಸಬೇಕಿದ್ದರೆ ಸರಕಾರದ ಶರತ್ತು ರೈತರು ಒಪ್ಪಬೇಕೆಂಬ ಅಭಿಪ್ರಾಯ ಕೇಳಿಬಂದಿತ್ತು. ಎಲ್ಲ ಸಮಸ್ಯೆಗಳು ಬೇಡಿಕೆಗಳನ್ನು ಚರ್ಚೆ ಮಾಡಲು ಸರಕಾರ ಸಿದ್ಧ ಎಂದು ಅಮಿತ್ ಶಾ ತಿಳಿಸಿದರು. ಆದರೆ ಸರಕಾರದ ಶರ್ತವನ್ನು ರೈತರು ತಳ್ಳಿಹಾಕಿದ್ದಾರೆ.