ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ನ.29: ಬಿಜೆಪಿ ಮಹಾರಾಷ್ಟ್ರದಲ್ಲಿ ಜನರ ತೀರ್ಪನ್ನು ಅವಮಾನಿಸಿಲ್ಲ ಬದಲಾಗಿ ಆ ಕೆಲಸವನ್ನು ಶಿವಸೇನೆ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಹಾ ವಿಕಾಸ್ ಅಗಾಡಿ ರಚಿಸಿ ಸಖ್ಯ ಮಾಡಿಕೊಳ್ಳುವುದಕ್ಕಾಗಿ ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ತಮ್ಮ ಆದರ್ಶವನ್ನು ಗಾಳಿಗೆ ತೂರಿದೆ ಎಂದರು. ಶಾಸಕರನ್ನು ಹೊಟೇಲಿನಲ್ಲಿ ಕೂಡಿ ಹಾಕಿ ಚುನಾವಣೆಯ ಮೊದಲಿದ್ದ ಸಖ್ಯವನ್ನು ಮುರಿದುಕೊಂಡಿದ್ದಾರೆ. ಅವರೇ ಈಗ ಬಿಜೆಪಿಯ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಆದರೆ ಬಿಜೆಪಿ ತಪ್ಪು ಮಾಡಿಲ್ಲ. ಶಿವಸೇನೆ ತಪ್ಪು ಮಾಡಿದೆ ಎಂದು ಅವರು ಹೇಳಿದರು.












