ತಿರಂಗಾ ಯಾತ್ರಾ: ಏಕಾಂಗಿಯಾಗಿ ದೇಶ ಪರ್ಯಟನೆ ಮಾಡಿದ ಗಡಿನಾಡ ಕನ್ನಡತಿ ಅಮೃತಾ ಜೋಷಿ ನಾಳೆ ಮಂಗಳೂರಿಗೆ

0
164

ಸನ್ಮಾರ್ಗ ವಾರ್ತೆ

ಮಂಗಳೂರು: ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಸವಿನೆನಪಿನಲ್ಲಿ ದೇಶ ಪರ್ಯಟನಾ  ತಿರಂಗಾ ಯಾತ್ರೆ ಮುಗಿಸಿದ ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ, ಮಂಗಳೂರಿನ ಕೆನರಾ ಗರ್ಲ್ಸ್ ಹೈಸ್ಕೂಲ್‌ನ ಹಳೆ ವಿದ್ಯಾರ್ಥಿನಿ ಅಮೃತಾ ಜೋಷಿ ಆಗಸ್ಟ್ 10 ರಂದು ಬೆಳಿಗ್ಗೆ 10.30 ಗಂಟೆಗೆ ಡೊಂಗರಕೇರಿ ಕೆನರಾ ಹೈಸ್ಕೂಲಿಗೆ ಭೇಟಿ ನೀಡಲಿದ್ದಾರೆ. ಅಮೃತಾ ಜೋಷಿಯವರನ್ನು ಕೆನರಾ ಅಸೋಸಿಯೇಶನ್ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಗುತ್ತದೆ‌.

ಅಮೃತಾ ಜೋಷಿಯವರು ತಿರಂಗಾ ಯಾತ್ರಾ ಅಭಿಯಾನದ ಅಂಗವಾಗಿ ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್‌ನಲ್ಲಿ ದೇಶವ್ಯಾಪಿ 22,000 ಕಿ.ಮೀ ಸಂಚರಿಸಿದ್ದಾರೆ.

ಬರ್ಮಾ, ಬಾಂಗ್ಲಾ, ನೇಪಾಳದ ಗಡಿಯಲ್ಲಿಯೂ ಸಂಚರಿಸಿದ್ದು, ಭಾರತೀಯ ಸೈನಿಕರ ಸವಾಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಬಂದಿದ್ದಾರೆ. ರಾಜ್ಯದ ಸಾಂಸ್ಕೃತಿಕ ರಾಯಭಾರಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಅಮೃತಾ ಜೋಷಿಯವರನ್ನು ಸ್ವಾಗತಿಸಿ, ಅಭಿನಂದಿಸುವ ಕಾರ್ಯಕ್ರಮ ನಡೆಯಲಿದೆ ಎಂಬುದಾಗಿ ವರದಿಯಾಗಿದೆ.