ಮುಸ್ಲಿಂ ವಿರೋಧಿ ಭಾಷಣ: ಬಿಜೆಪಿಯ ದೆಹಲಿ ಮುಖಂಡನ ವಿರುದ್ಧ ಸಿಜೆಪಿ ದೂರು

0
300

ಸನ್ಮಾರ್ಗ ವಾರ್ತೆ

ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿರುವ ಬಿಜೆಪಿಯ ದೆಹಲಿಯ ಕೌನ್ಸಿಲರ್ ರವೀಂದ್ರ ಸಿಂಗ್ ನೇಗಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಿಟಿಝನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್ ಅಥವಾ ಸಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಜನವರಿ 6ರಂದು ದೆಹಲಿಯ ಪ್ರತಾಪ್ ಘರ್ ನ ಚುನಾವಣಾ ಸಭೆಯಲ್ಲಿ ಅವರು ಮುಸ್ಲಿಂ ವಿರೋಧಿ ಭಾಷಣ ಮಾಡಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ.

ಮುಸ್ಲಿಮರನ್ನು ಮೊಘಲರ ವಂಶಜರು ಎಂದು ಟೀಕಿಸಿದ ನೇಗಿ, ಈ ದೇಶಕ್ಕೆ ಮುಸ್ಲಿಮರ ಜನಸಂಖ್ಯೆಯಿಂದ ಬೆದರಿಕೆ ಇದೆ ಎಂದು ಹೇಳಿರುವುದಾಗಿ ಸಿಜೆಪಿ ತನ್ನ ದೂರಿದಲ್ಲಿ ತಿಳಿಸಿದೆ.

ಮುಸ್ಲಿಮರ ಬೆದರಿಕೆಯಿಂದ ಹಿಂದುಗಳನ್ನ ರಕ್ಷಿಸಬೇಕಿದೆ ಎಂದು ಅವರು ಹೇಳಿರುವುದನ್ನು ಸಿಜೆಪಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.

ಮುಸ್ಲಿಮರನ್ನು ಮೊಘಲರ ವಂಶದವರೆಂದು ಹೇಳುವ ಮೂಲಕ ಮತ್ತು ಹಿಂದುಗಳು ಮುಸ್ಲಿಮರಿಂದಾಗಿ ಅಪಾಯದಲ್ಲಿದ್ದಾರೆ ಎಂದು ವ್ಯಾಖ್ಯಾನಿಸುವ ಮೂಲಕ ಚುನಾವಣೆಯನ್ನು ಹಿಂದೂ ಮುಸ್ಲಿಂ ಎಂದು ವಿಭಜಿಸುವುದಕ್ಕೆ ನೇಗಿ ಯತ್ನಿಸಿದ್ದಾರೆ, ಹಾಗೆಯೇ ಬಾಂಗ್ಲಾದೇಶದ ಹಿಂದುಗಳ ಬಗ್ಗೆ ಮತ್ತು ಕಾಶ್ಮೀರದ ಪಂಡಿತರ ವಲಸೆಯ ಬಗ್ಗೆ ಅವರು ಉಲ್ಲೇಖಿಸಿ ಇದಕ್ಕೆ ಮುಸ್ಲಿಮರು ಕಾರಣ ಎಂಬಂತೆ ಪರೋಕ್ಷವಾಗಿ ಬಿಂಬಿಸಿದ್ದಾರೆ. ಆದರೆ ಇವೆರಡು ಪ್ರಕರಣಗಳಿಗೂ ಮುಸ್ಲಿಮರಿಗೂ ಸಂಬಂಧ ಇಲ್ಲ. ಅದು ಸರಕಾರಿ ಮಟ್ಟದಲ್ಲಿ ನಡೆದಿರುವ ಘಟನೆಗಳು. ಆದರೆ ಮುಸ್ಲಿಮರನ್ನು ಇಂತಹ ಪ್ರಕರಣಗಳಿಗೆ ಹೊಣೆಗಾರರಂತೆ ಬಿಂಬಿಸಿ ಚುನಾವಣೆಯನ್ನು ಧರ್ಮಧಾರಿತವಾಗಿ ಮಾಡಲು ಅವರು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.