ಸನ್ಮಾರ್ಗ ವಾರ್ತೆ
ಬೆಂಗಳೂರು: ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಕರ್ನಾಟಕದ ವತಿಯಿಂದ ಡಾ. ಕಫೀಲ್ ಖಾನ್ ಅವರ ‘ದಿ ಗೋರಖಪುರ್ ಹಾಸ್ಪಿಟಲ್ ಟ್ರಾಜೆಡಿ’ ಕೃತಿಯ ಕನ್ನಡ ಅನುವಾದವಾದ ʻಗೋರಖಪುರ್ ಆಸ್ಪತ್ರೆ ದುರಂತʼ ಪುಸ್ತಕದ ಕುರಿತು ವಿಶೇಷ ಸಂವಾದ ಕಾರ್ಯಕ್ರಮವು ಅಕ್ಟೋಬರ್ 7, 2026 ರ ಸಂಜೆ 6:30 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಂ ಕಟ್ಟಡದ ಬಿಫ್ಟ್ ಹಾಲ್ನಲ್ಲಿ ನಡೆಯಲಿದೆ.
ಈ ಕೃತಿಯನ್ನು ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಕನ್ನಡಕ್ಕೆ ಅನುವಾದಿಸಿದ್ದು, ಬಹುರೂಪಿ ಪಬ್ಲಿಕೇಷನ್ ಮೂಲಕ ಜಿ.ಎನ್. ಮೋಹನ್ ಪ್ರಕಟಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೃತಿ ಕರ್ತೃ ಡಾ. ಕಫೀಲ್ ಖಾನ್, ಅನುವಾದಕ ಹಾಗೂ ಹಿರಿಯ ಪತ್ರಕರ್ತ ಬಿ.ಎಂ. ಹನೀಫ್, ಹೈಕೋರ್ಟ್ ವಕೀಲ ಪಿ. ಉಸ್ಮಾನ್ ಹಾಗೂ ಆಕ್ಷನ್ ಫಾರ್ ಈಕ್ವಿಟಿಯ ಸಹ-ಸ್ಥಾಪಕಿ ಡಾ. ಸ್ವಾತಿ ಎಸ್.ಬಿ. ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಪಿಸಿಆರ್ ಕರ್ನಾಟಕದ ರಾಜ್ಯ ಸಂಯೋಜಕ ಮೊಹಮ್ಮದ್ ಪೀರ್ ಅವರು ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಆಸಕ್ತರೆಲ್ಲರೂ ಪಾಲ್ಗೊಳ್ಳುವಂತೆ ಆಯೋಜಕರು ಕೋರಿದ್ದಾರೆ.












