ಸರಕಾರದ ವಿಶ್ವಾಸ ಕಳಕೊಂಡ ಆಪಲ್, ಸ್ಯಾಮ್ಸಂಗ್

0
266

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: 2028ರ ಅಕ್ಟೋಬರ್ ವೇಳೆಗೆ ಭಾರತದಲ್ಲೇ ಸಂಪೂರ್ಣವಾಗಿ ವಿನ್ಯಾಸಗೊಳಿಸಲ್ಪಟ್ಟು ತಯಾರಿಸಲ್ಪಡುವ ಭಾರತೀಯ ಬ್ರ‍್ಯಾಂಡ್ ಸ್ಮಾರ್ಟ್ಫೋನ್‌ಗಳು ನಿರ್ಮಾಣಗೊಂಡು ಮಾರುಕಟ್ಟೆಗೆ ಬರಲಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಜಾಗತಿಕ ಬ್ರ‍್ಯಾಂಡ್‌ಗಳೊಂದಿಗೆ ಸ್ಪರ್ಧೆಯೊಡ್ಡುವ ಸ್ಮಾರ್ಟ್ ಫೋನ್‌ಗಳು ಭಾರತದಲ್ಲೇ ತಯಾರಾಗಲಿದೆ. ಆಪಲ್, ಸ್ಯಾಮ್‌ಸಂಗ್ ಮುಂತಾದ ಅಂತರರಾಷ್ಟ್ರೀಯ ದೈತ್ಯರ ಪ್ರಾಬಲ್ಯವಿರುವ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭಾರತದ ಸ್ವಂತ ಸ್ಥಳೀಯ ಬ್ರ‍್ಯಾಂಡ್ ಇರುವುದು ಸ್ಮಾರ್ಟ್ ಫೋನ್ ನಿರ್ಮಾಣದ ಮುಖ್ಯ ಗುರಿಯಾಗಿದೆ ಎಂದು ಸಚಿವರು ಹೇಳಿದರು.
ಮೂರು ವರ್ಷಗಳ ಹಿಂದೆ ಭಾರತೀಯ ವಿನ್ಯಾಸಕರಿಗೆ ನೀಡಲಾದ ಸವಾಲಿನ ಭಾಗವಾಗಿ, ಮೊಬೈಲ್ ಫೋನ್‌ನ ಮದರ್ ಬೋರ್ಡ್ ಸೇರಿದಂತೆ ಪ್ರಮುಖ ಭಾಗಗಳನ್ನು ಯಶಸ್ವಿಯಾಗಿ ವಿನ್ಯಾಸಗೊಳಿಸಲು ಭಾರತೀಯ ಕಂಪನಿಗಳಿಗೆ ಸಾಧ್ಯವಾಯಿತು. ಈ ತಾಂತ್ರಿಕ ಪ್ರಗತಿಯು ಸ್ವಂತ ಸ್ಮಾರ್ಟ್ಫೋನ್ ಬ್ರ‍್ಯಾಂಡ್ ನಿರ್ಮಿಸುವುದಕ್ಕೆ ಸರ್ಕಾರವನ್ನು ಪ್ರೇರೇಪಿಸಿದೆ.

ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳು ಸಕ್ರಿಯಗೊಳ್ಳುತ್ತಿರುವುದು ಮತ್ತು ಭಾರತವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಸ್ವಾರ್ಟ್ ಫೋನ್ ಸ್ವಂತ ತಯಾರಿ ಇದಕ್ಕೆ ಸೇರ್ಪಡೆಗೊಳ್ಳುತ್ತಿರುವ ಇನ್ನೊಂದು ಹೆಮ್ಮೆಯ ಸಂಗತಿಯಾಗಲಿದೆ. ಇದೇ ವೇಳೇ ಫೋನ್‌ಗೆ ನಿಖರವಾದ ಬೆಲೆ ಎಷ್ಟು ಅಥವಾ ಅದರ ಇತರ ತಾಂತ್ರಿಕ ವೈಶಿಷ್ಟ್ಯಗಳನ್ನು ಇದುವರೆಗೆ ಅಧಿಕೃತವಾಗಿ ಬಹಿರಂಗಪಡಿಸಿಲ್ಲವಾದರೂ, ಮುಂಬರುವ ವರ್ಷಗಳಲ್ಲಿ ಭಾರತವು ವಿನ್ಯಾಸ ಕ್ಷೇತ್ರದಲ್ಲೂ ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ಬರಲಿದೆ ಎಂದು ಸಚಿವರ ಮಾತುಗಳು ದೃಢೀಕರಿಸುತ್ತಿವೆ.