ನಿಮ್ಮ ಗೆಳೆಯರು ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರಾ?

0
225

✍️ ಜಾಸಿಮುಲ್ ಮುತವ್ವ

“ಮಿತ್ರರು ಮತ್ತು ಆಪ್ತರ ಜೊತೆಗಿನ ನನ್ನ ಸಂಬಂಧವನ್ನು ಹೇಗೆ ಅಳೆಯಬಹುದು?” ಎಂದು ಅವರು ಕೇಳಿದರು. ನಾನು ಹೇಳಿದೆ.

“ಇತರರ ಜೊತೆಗಿನ ನಿಮ್ಮ ಸಂಬಂಧದ ಮೌಲ್ಯಗಳನ್ನು ಅಳೆಯಲು ಕೆಲವು ದಾರಿಗಳಿವೆ. ನೀವು ಪ್ರೀತಿಸಲ್ಪಡುವವರೋ ಅಥವಾ ದ್ವೇಷಿಸಲ್ಪಡುವವರೋ ಎಂಬುದನ್ನು ಅದರಿಂದ ಅರಿಯಬಹುದಾಗಿದೆ. ಅದು ಮಿತ್ರರ ಜೊತೆಗಿನ ಸಂಬಂಧವಾಗಿರಬಹುದು, ದಾಂಪತ್ಯ ಸಂಬಂಧವಾಗಿರಬಹುದು, ಅಥವಾ ಮಾತಾಪಿತರ ಜೊತೆಗಿನ ಸಂಬಂಧವಾಗಿರಬಹುದು. ವ್ಯಾಪಾರ ವಹಿವಾಟುಗಳ ಕುರಿತ ಸಂಬಂಧವಾಗಿರಬಹುದು. ನಾನು ಹೇಳಲು ಹೊರಟಿರುವ ಐದು ಗುಣಗಳಲ್ಲಿ ಯಾವುದಾದರೊಂದು ಗುಣ ನಿಮ್ಮಲ್ಲಿದೆಯೆಂದಾದರೆ ನಿಮ್ಮ ಸಂಬಂಧ ಹಳಸುವತ್ತ ಸಾಗುತ್ತಿದೆ ಎಂಬುದನ್ನು ಅರ್ಥೈಸಬೇಕು. ಅದನ್ನು ಅರಿತುಕೊಂಡು ತಿದ್ದಿಕೊಂಡು ಸಂಬಂಧ ಬಲಪಡಿಸಲು ನೀವು ಪ್ರಯತ್ನಿಸಬೇಕು.

ಒಂದು: ಆಶಯ ವಿನಿಮಯದಲ್ಲಿನ ಲೋಪ. ಇತರರ ಜೊತೆಗಿನ ಆಶಯ ಸಂವಾದದಿಂದ ತಪ್ಪಿಸಿಕೊಳ್ಳುವುದು ಅಥವಾ ಅದರಲ್ಲಿ ವೈಫಲ್ಯತೆ ಅನುಭವಿಸುವುದು. ನೀವು ಸಂಬಂಧವಿಟ್ಟಿರುವ ನಿಮ್ಮ ಎದುರುವಾದಿಯಿಂದ ಪ್ರಕಟವಾಗುವ ನಿರ್ಲಕ್ಷ್ಯ ಭಾವನೆಯಿಂದ ನಿಮಗೆ ಅದನ್ನು ಊಹಿಸಬಹುದು. ನೀವು ಭಾವನಾತ್ಮಕವಾಗಿ ಅಭಿಪ್ರಾಯ ಪ್ರಕಟಿಸುವಾಗ ಅದೇ ರೀತಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸದೇ ಇದ್ದರೆ ಅಥವಾ ಆತ ಹೇಗಾದರೂ ಮಾಡಿ ಅಲ್ಲಿಂದ ಜಾರಿಕೊಳ್ಳುವ ಶ್ರಮ ಮಾಡುತ್ತಿದ್ದರೆ ನಿಮ್ಮ ಸಂಬಂಧಗಳು ಹಳಸುತ್ತಿವೆ ಎಂಬುದನ್ನು ಅರ್ಥೈಸಿ ಕೊಳ್ಳಬೇಕು. ಆದರೆ ಸ್ಪಷ್ಟವಾದ ಕಾರಣಗಳಿಗಾಗಿ ಹೀಗೆ ಆದರೆ ಅದನ್ನು ಈ ವ್ಯಾಪ್ತಿಗೆ ಸೇರಿಸುವಂತಿಲ್ಲ.

ಎರಡು: ನಿರಂತರ ನಡೆಯುವ ವಾಗ್ವಾದ ತರ್ಕಗಳು. ಇದು ಪ್ರೀತಿಯ ಕೊರತೆ ಮತ್ತು ಆತನನ್ನು ಒಪ್ಪಿಕೊಳ್ಳದೆ ಇರುವ ವೈಮನಸ್ಸಿನ ಸಂಕೇತವಾಗಿದೆ. ಅದಕ್ಕಾಗಿ ನಿಮ್ಮ ಅಭಿಪ್ರಾಯವನ್ನು ಏಕಾಏಕಿ ತಿರಸ್ಕರಿಸುವುದು. ಆದರೆ ಸಂಬಂಧಗಳು ಉತ್ತಮವಾಗಿ ಇರುವಾಗಿನ ಸ್ಥಿತಿಯನ್ನು ಇದಕ್ಕೆ ಅನ್ವಯಿಸಬಾರದು. ಆವಶ್ಯಕವಾದ ವಿಚಾರಗಳಲ್ಲಿ ಚರ್ಚೆ ಸಂವಾದಗಳು ನಡೆಸುವುದು ಸಂಬಂಧಗಳನ್ನು ಹಳಸುತ್ತದೆ ಎಂದು ನಾನು ಹೇಳುವುದಲ್ಲ.

ಮೂರು: ಸುಳ್ಳು ಹೇಳುವುದು ಸಂಬಂಧಗಳು ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ, ಇಲ್ಲದಾದಾಗ ಸುಳ್ಳು ಹೇಳಿ ಅಡ್ಡ ದಾರಿ ಹಿಡಿಯುವ ಪ್ರಕ್ರಿಯೆ ಉದ್ಭವಿಸುತ್ತದೆ. ಈ ದುರ್ಗುಣವು ಸಂಬಂಧವು ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

ನಾಲ್ಕು: ಗೌರವಾದರದ ಕೊರತೆ. ಪರಸ್ಪರ ಗೌರವಿಸುವುದು ಆರೋಗ್ಯಕರವಾದ ಸಂಬಂಧದ ತಳಹದಿಯಾಗಿದೆ. ಅನ್ಯೋನ್ಯತೆಯಲ್ಲಿ ಗೌರವಾದರ ಕುಂಠಿತವಾದಾಗ ಟೀಕೆ, ಅವಹೇಳನ, ನಿಂದನೆ, ಸುಳ್ಳಾ ರೋಪಗಳಾಗಿ, ಕುಂದುಕೊರತೆಗಳನ್ನು ಪತ್ತೆದಾರಿಕೆ ಮಾಡಿ ಬಹಿರಂಗಪಡಿಸಲಾಗುತ್ತದೆ. ನಂತರ ಸಂಬಂಧಗಳು ಹಳಸಿ ವೈಯಕ್ತಿಕ ಲೋಪ ದೋಷಗಳು ಬಹಿರಂಗಕ್ಕೆ ಬರುವುದು. ಕೊನೆಗೆ ಸಂಬಂಧಗಳು ನಶಿಸುವುದು.

ಐದು: ಪರಸ್ಪರ ನಂಬಿಕೆಯ ಕೊರತೆ. ಇದು ಪರಸ್ಪರ ಸಂಬಂಧಗಳು ಹಳಸಲು ಪ್ರಮುಖ ಕಾರಣವಾಗಿದೆ. ಸಂಬಂಧಗಳಲ್ಲಿ ನಂಬಿಕೆಯ ಕೊರತೆ ಉಂಟಾದರೆ ಹಳಸಲು ಪ್ರಾರಂಭವಾಗುತ್ತದೆ. ಸಂಬಂಧಗಳಲ್ಲಿ ಸ್ವಲ್ಪ ಬಿರುಕು ಬಿಟ್ಟರೂ ನಂತರ ಪ್ರಾಮಾಣಿಕವಾದ ಬೆರೆಯುವಿಕೆ ಕಷ್ಟವಾಗುತ್ತದೆ. ಎಲ್ಲಾ ಸಂಬಂಧಗಳಲ್ಲೂ ಮೇಲ್ಮಟ್ಟ ಮತ್ತು ಕೆಳಮಟ್ಟವಿದೆ. ಮಾತಾಪಿತರ ಜೊತೆಗಿನ ಬಾಂಧವ್ಯ, ಪತಿ-ಪತ್ನಿಯರ ನಡುವಿನ ಬಾಂಧವ್ಯ, ಗೆಳೆಯರ ನಡುವಿನ ಬಾಂಧವ್ಯ ಈ ಎಲ್ಲದಕ್ಕೂ ಈ ಮಾಪನ ಅನ್ವಯಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಸಂಬಂಧವನ್ನು ಭದ್ರಗೊಳಿಸಲು ಕೆಲವು ನೀತಿ ನಿಯಮಗಳನ್ನು ಅಳವಡಿಸಿಕೊಂಡು ಪ್ರಜ್ಞಾ ಪೂರ್ವಕ ಪ್ರಯತ್ನ ನಡೆಸಬೇಕು. ಅದಕ್ಕೆ ಹಲವು ದಾರಿಗಳಿವೆ. ಉಡುಗೊರೆಗಳನ್ನು ನೀಡುವುದು. ಜೊತೆಗೆ ಉಪಾಹಾರಗಳನ್ನು ಮಾಡುವುದು ಅದಕ್ಕಿರುವ ಉತ್ತಮ ದಾರಿಯಾಗಿದೆ.

“ನೀವು ಉಪಾಹಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಿರಿ, ನಿಮ್ಮಲ್ಲಿ ಅನ್ಯೋನ್ಯತೆ ವರ್ಧಿಸುತ್ತದೆ.” (ಪ್ರವಾದಿ ವಚನ) ಅದರಲ್ಲಿ ಪಡೆಯುವವನಿಗೆ ನಿಮ್ಮ ಸ್ನೇಹದ ಸಂದೇಶ ಅರ್ಥವಾಗುತ್ತದೆ. ಅದರಿಂದ ಸಂಬಂಧಗಳು ಉತ್ತಮವಾಗುತ್ತದೆ. ಅದಕ್ಕಿಂತ ಮುಖ್ಯ ಮನ ಬಿಚ್ಚಿ ಮಾತನಾಡುವುದಾಗಿದೆ. ಸಂಬಂಧಗಳು ಶಿಥಿಲಗೊಂಡಾಗ ಸ್ವಿಚ್ ಹಾಕಿದ ಕೂಡಲೇ ಬಲ್ಬ್ ಉರಿದಂತೆ ತಕ್ಷಣ ಪೂರ್ವ ಸ್ಥಿತಿಗೆ ಮರಳಬೇಕೆಂದಿಲ್ಲ. ಅದಕ್ಕೆ ಸಮಯ ತಗಲುತ್ತದೆ. ಸಾಮಾಜಿಕ ಸಂಬಂಧಗಳು ಮರದಂತೆ ಹೂವಾಗಿ ಕಾಯಾಗಿ ಫಲ ನೀಡಲು ಉತ್ತಮ ಆರೈಕೆ ಬೇಕು.

ಎಲ್ಲವನ್ನೂ ಗಮನವಿಟ್ಟು ಆಲಿಸಿದ ಆ ವ್ಯಕ್ತಿಯು “ತಾವು ವಿವರಿಸಿದ ಈ ಐದು ಸಿದ್ಧಾಂತಗಳು ಬಹಳ ಪ್ರಾಮುಖ್ಯವಾದುದಾಗಿದೆ. ನಾನೊಂದು ವಿಷಯ ಹೇಳಲೇ? ನನಗೂ ಒಬ್ಬ ಸ್ನೇಹಿತನಿದ್ದಾನೆ. ಆತನ ಜೊತೆಗಿನ ನನ್ನ ಸಂಬಂಧವು ಹಳಸಿದಂತಾಗಿದೆ. ಅದು ಮರಳಿ ಪೂರ್ವ ಸ್ಥಿತಿಯಂತಾಗಬೇಕು ಎನ್ನುವುದು ನನ್ನ ಬಯಕೆ. ನಾನು ಅದಕ್ಕೆ ಏನು ಮಾಡಲಿ?”

ನಾನು ಹೇಳಿದೆ: “ಗೆಳೆಯರೊಂದಿಗಾಗಲೀ ಪತ್ನಿಯೊಂದಿಗಾಗಲೀ ಅಷ್ಟೇ ಏಕೆ ಮಕ್ಕಳ ಜೊತೆಗಿರುವ ಸಂಬಂಧ ಇವೆಲ್ಲಾ ಬಿದ್ದು ಸಿಕ್ಕುವಂತಹ ವಸ್ತುವಲ್ಲ. ಪ್ರಜ್ಞಾಪೂರ್ವಕವಾಗಿ ಗಳಿಸಿಕೊಳ್ಳುವಂತಹದ್ದು. ಸಂಬಂಧಗಳು ತನ್ನಿಂತಾನೇ ಬೆಳೆಯುವುದಿಲ್ಲ. ಅದಕ್ಕೆ ಆರೈಕೆ, ಪ್ರಯತ್ನಬೇಕು. ಅದರ ಜೊತೆಗೆ ಪ್ರೀತಿ ಎಂಬುದು ಅಲ್ಲಾಹನಿಂದ ದೊರೆಯುವ ವರದಾನವಾಗಿದೆ.

ಬದುಕಿನ ಮೊದಲಾರ್ಧದಲ್ಲಿ ನಮಗೆ ಬಹಳಷ್ಟು ಸ್ನೇಹಿತರು ಮಿತ್ರರು ಇರಬಹುದು. ಎರಡನೇ ಅವಧಿಯಲ್ಲಿ ನಾವು ಆತ್ಮೀಯ ಮಿತ್ರರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಅವರ ಜೊತೆಗಿನ ಸಂಬAಧವನ್ನು ಕಾಪಾಡಿಕೊಳ್ಳುತ್ತೇವೆ. ಅದನ್ನು ಇನ್ನಷ್ಟು ಸುದೃಢಗೊಳಿಸುತ್ತೇವೆ. ತನ್ನನ್ನು ಪ್ರೀತಿಸುವ, ತನ್ನ ಬಗ್ಗೆ ಗಮನ ಹರಿಸುವ ನನಗೆ ವಿಶೇಷ ಮಹತ್ವ ನೀಡುವ ಓರ್ವ ವ್ಯಕ್ತಿ ನಮ್ಮ ಬದುಕಿನಲ್ಲಿದ್ದರೆ ಅದು ನಮಗೆ ಹೆಚ್ಚು ಸಂತೋಷ, ಆನಂದ ನೀಡುತ್ತದೆ.