ಅರ್ನಾಬ್ ಗೋಸ್ವಾಮಿ ಹೈಕೋರ್ಟಿನಲ್ಲಿ ಕ್ಷಮೆಯಾಚಿಸಿದ್ದಾರೆ: ಯಾಕಿರಬಹುದು? ಕುತೂಹಲವೇ ನೋಡಿ…

0
277

ದಿವಂಗತ ಆರ್ ಪಚೌರಿಯವರು ನೀಡಿರುವ ದೂರಿಗೆ ಸಂಬಂಧಿಸಿ ಅರ್ನಾಬ್ ಗೋಸ್ವಾಮಿಯವರಿಂದ ದೆಹಲಿ ಹೈಕೋರ್ಟ್ ನಲ್ಲಿ ಕ್ಷಮೆ ಯಾಚನೆ

ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ದೆಹಲಿ ಹೈ ಕೋರ್ಟ್ ನ ಮುಂದೆ ನಿಶ್ಯರ್ಥ ಕ್ಷಮೆ ಯಾಚಿಸಿದ್ದಾರೆ. ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ ನ ಮಾಜಿ ಮುಖ್ಯಸ್ಥ ಮತ್ತು ವಾತಾವರಣಕ್ಕೆ ಸಂಬಂಧಿಸಿದ ಕಾರ್ಯಕರ್ತರಾಗಿದ್ದ ದಿವಂಗತ ಆರ್ ಪಚೌರಿಯವರು ನೀಡಿರುವ ದೂರಿಗೆ ಸಂಬಂಧಿಸಿ ಅರ್ನಾಬ್ ಈ ಕ್ಷಮೆ ಯಾಚಿಸಿದ್ದಾರೆ

ಪಚೌರಿ ವಿರುದ್ಧ ಎದ್ದಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡುವುದನ್ನು ಕೋರ್ಟು ನಿಷೇಧಿಸಿತ್ತು. ಆದರೆ ಈ ಆದೇಶವನ್ನು ಅರ್ನಾಬ್ ಸಹಿತ ಹಲವು ಮಾಧ್ಯಮ ಸಂಸ್ಥೆಗಳು ಪಾಲಿಸುತ್ತಿಲ್ಲ ಎಂದು 2016 ಫೆಬ್ರವರಿಯಲ್ಲಿ ಪಚೌರಿ ಕೋರ್ಟು ನಿಂದೆ ಕೇಸು ದಾಖಲಿಸಿದ್ದರು.

ಮಾನ್ಯ ಕೋರ್ಟು ತನ್ನ ಕ್ಷಮಾಯಾಚನೆಯನ್ನು ಸ್ವೀಕರಿಸಿ ತನ್ನ ವಿರುದ್ಧ ಕ್ರಮ ಜರುಗಿಸುವುದನ್ನು ಶೀಘ್ರ ಕೊನೆಗೊಳಿಸಬೇಕು ಎಂದು ಮನವಿ ಮಾಡುವೆ ಎಂದು ಅರ್ನಾಬ್ ಅಫಿದವಿತ್ ಸಲ್ಲಿಸಿದ್ದಾರೆ. ಇನ್ನು ಮುಂದೆ ಇಂತಹ ಚಟುವಟಿಕೆ ಮಾಡಲ್ಲ ಎಂದು ಕೂಡ ಅವರು ಕೋರ್ಟಿನಲ್ಲಿ ನಿವೇದಿಸಿದ್ದಾರೆ.

ಈ ಕೇಸು ದಾಖಲಿಸುವಾಗ ಅರ್ನಾಬ್ ಗೋಸ್ವಾಮಿ ಟೈಮ್ಸ್ ನೌ ಚಾನೆಲ್ ನಲ್ಲಿ ಇದ್ದರು

ಪಚೌರಿ ಅವರು 2020ರಲ್ಲಿ ನಿಧನರಾದರು.