33 ವರ್ಷ ಜೈಲಿನಲ್ಲಿ ಕಳೆದ ವ್ಯಕ್ತಿ ಈಗ ನಿರಪರಾಧಿ: ಅಷ್ಟಕ್ಕೂ ಅವನ ಮೇಲಿದ್ದ ಆರೋಪ ಎಂತದ್ದು?

0
162

ಸನ್ಮಾರ್ಗ ವಾರ್ತೆ

ಅಮೇರಿಕಾ, ಹತ್ಯಾಯತ್ನ ಪ್ರಕರಣ; 33 ವರ್ಷಗಳ ಶಿಕ್ಷೆ ಬಳಿಕ ವ್ಯಕ್ತಿ ನ್ಯಾಯಾಲಯದಿಂದ ನಿರಪರಾಧಿ ಎಂದು ಬಿಡುಗಡೆ

ಹತ್ಯಾಯತ್ನದ ಅಪರಾಧದಲ್ಲಿ 33 ವರ್ಷಗಳ ಕಾಲ ಜೈಲಲ್ಲಿ ಕಳೆದ ವ್ಯಕ್ತಿಯನ್ನು ಅಮೆರಿಕಾದ ಕ್ಯಾಲಿಫೋರ್ನಿಯಾದ ನ್ಯಾಯಾಲಯ ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ.

ಈಗ 55 ವರ್ಷವಾಗಿರುವ ಡೇನಿಯಲ್ ಸಾಲ್ದಾನನಿಗೆ 1990ರಲ್ಲಿ ಶಿಕ್ಷೆ ವಿಧಿಸಲಾಗಿತ್ತು.

ಫುಟ್ಬಾಲ್ ಆಟ ಮುಗಿದು ಕಾರಿನಲ್ಲಿ ತೆರಳುತ್ತಿದ್ದ ಆರು ಮಂದಿ ಹದಿಹರೆಯದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿರುವ ಆರೋಪ ಇವರ ಮೇಲಿತ್ತು. ಈ ಹಾರಾಟದಲ್ಲಿ ಇಬ್ಬರು ಗಾಯಗೊಂಡಿದ್ದರು. ಆ ಸಮಯದಲ್ಲಿ ಸಲ್ದಾನ ಅವರಿಗೆ 22 ವರ್ಷವಾಗಿತ್ತು ಮತ್ತು ನಿರ್ಮಾಣ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರ ಜೊತೆಗೆ ಇತರ ಮೂವರ ಮೇಲು ಕೂಡ ಆರೋಪ ಹೊರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ 45 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು.

ಪ್ರತಿದಿನ ಜೈಲಿನ ಕೋಣೆಯಲ್ಲಿ ಬೆಳಗೆ ಎದ್ದು ಕುಳಿತಾಗ ನನ್ನ ಮನಸ್ಸು ನೀನು ನಿರಪರಾಧಿ ಎಂದು ಹೇಳುತ್ತಿತ್ತು ಮತ್ತು ನಾನು ಕಣ್ಣೀರು ಹಾಕುತ್ತಿದ್ದೆ ಎಂದು ಬಿಡುಗಡೆಗೆ ಹರ್ಷ ವ್ಯಕ್ತಪಡಿಸಿದ ಸಲ್ದಾನ ಪ್ರತಿಕ್ರಿಯಿಸಿದ್ದಾರೆ.

ಈ ಘಟನೆಯಲ್ಲಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿ 2017ರಲ್ಲಿ ಬಹಿರಂಗಪಡಿಸಿದ ಮಾಹಿತಿಯಿಂದಾಗಿ ಸಲ್ದಾನ ಅವರ ಬಿಡುಗಡೆ ಸಾಧ್ಯವಾಗಿದೆ.

ಆ ಶೂಟಿಂಗ್ ನ ಸಂದರ್ಭದಲ್ಲಿ ಸಾಲ್ದಾನ ಆ ಸ್ಥಳದಲ್ಲಿ ಇರಲಿಲ್ಲ ಎಂದಾತ ಹೇಳಿದ್ದ.