ಸನ್ಮಾರ್ಗ ವಾರ್ತೆ
ಕೌಸಂಬಿ, ನ.21: ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆರೋಪಿಯ ಸಹೋದರ ಕಡಿದು ಕೊಲೆ ಮಾಡಿದ ಘಟನೆ ನಡೆದಿದ್ದು ಕೌಸಂಭಿ ಜಿಲ್ಲೆಯ ಮಹೋವ ಘಟ್ಟದಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಆರೋಪಿಯ ಸಹೋದರ ಬಾಲಕಿಯ ಹತ್ಯೆ ಮಾಡಿದ್ದೆಂದು ಪೊಲೀಸರು ತಿಳಿಸಿದರು.
ಬಾಲಕಿಯನ್ನು ಹಿಂಭಾಲಿಸಿ ಆರೋಪಿ ಕೊಡಲಿಯಿಂದ ಕಡಿದು ಕೊಲೆ ಮಾಡಿದ. ಬಾಲಕಿಯನ್ನು ಅತ್ಯಾಚಾರಕ್ಕೊಳಪಡಿಸಿದ್ದ ಆರೋಪಿಗೆ ಕೆಲವು ದಿನಗಳ ಹಿಂದೆಯಷ್ಟೇ ಜಾಮೀನು ದೊರಕಿತ್ತು. ಬಾಲಕಿ ನೀಡಿದ ದೂರಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ನಂತರ ರಾಜಿಗೆ ಬಾಲಕಿಯ ಕುಟುಂಬವನ್ನು ಆರೋಪಿ ಸಂಪರ್ಕಿಸಿ ಒತ್ತಡ ಹಾಕುತ್ತಿದ್ದ. ಆದರೆ ಕುಟುಂಬ ಕೇಸಿನೊಂದಿಗೆ ಮುಂದುವರಿದಿದ್ದು. ಅಂತಿಮವಾಗಿ ಬಾಲಕಿಯ ಹತ್ಯೆಯನ್ನೇ ದುರುಳರು ಮಾಡಿದರು. ಹತ್ಯೆಗೊಳಗಾದ ಬಾಲಕಿಯ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ.