ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ: ಮೂವರ ಬಂಧನ

0
7118

ಹೊಸದಿಲ್ಲಿ, ಆ. 3: ಹರಿಯಾಣದ ಹಿಸ್ಸಾರ್ ನಲ್ಲಿ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು ಬಂಧಿತರ ಫೋನ್‍ನಿಂದ ಸೈನಿಕ ಶಿಬಿರಗಳ ಫೋಟೊ, ವೀಡಿಯೊ ಮತ್ತು ಸೈನಿಕರ ಸಂಚರಿಸುವ ಮಾರ್ಗಗಳ ದೃಶ್ಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಪ್ರದೇಶದ ಮೆಹ್ತಾಬ್ (28), ಖಾಲಿದ್ (25) ಮತ್ತು ರಾಖಿಬ್ (34) ಎಂಬವರನ್ನು ಬೇಹುಗಾರಿಕೆ ಆರೋಪದಲ್ಲಿ ಹಿಸ್ಸಾರ್ ನ ಕಂಟೊನ್ಮೆಂಟ್ ಪ್ರದೇಶದಿಂದ ಬಂಧಿಸಲಾಗಿದ್ದು ಇವರು ಇಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರು. ಪಾಕ್ ಏಜೆಂಟರೊಂದಿಗೆ ಇವರು ವಾಟ್ಸಪ್‍ನಲ್ಲಿ ವಾಯ್ಸ್, ವೀಡಿಯೊ ಕಾಲ್‍ಗಳ ಮೂಲಕ ಸಂಪರ್ಕಿಸಿದ್ದಾರೆ ಎಂದು ಇಂಟಲಿಜೆನ್ಸ್ ಮೂಲಗಳು ಪತ್ತೆ ಹಚ್ಚಿವೆ. ಹಿಸ್ಸಾರ್ ಪೊಲೀಸರು ವಿವರವಾಗಿ ತನಿಖೆ ನಡೆಸುವ ಸಲುವಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.