ಬ್ರೇಕಿಂಗ್ ನ್ಯೂಸ್: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಕಾಶ್ಮೀರವನ್ನು ವಿಭಜಿಸಿದ ಕೇಂದ್ರ ಸರಕಾರ: ಕೇಂದ್ರವನ್ನು ಬೆಂಬಲಿಸಿದ ಬಿಎಸ್ಪಿ

0
1368

ಹೊಸದಿಲ್ಲಿ, ಆ. 5: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಪರಿಚ್ಛೇದವನ್ನು ಕೇಂದ್ರ ಸರಕಾರ ರದ್ದು ಪಡಿಸಿದೆ. ರಾಜ್ಯವನ್ನು ಎರಡಾಗಿ ವಿಭಜಿಸಲಾಗಿದೆ. ವಿಶೇಷ ಸ್ಥಾನಮಾನ ರದ್ದುಪಡಿಸಿದ ಆದೇಶಕ್ಕೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು ಹೊರಡಿಸಲಾಗಿದೆ. ಜಮ್ಮು ಕಾಶ್ಮೀರವನ್ನು ಎರಡಾಗಿ ವಿಭಜಿಸಿ ಕೇಂದ್ರಾಳಿತ ಪ್ರದೇಶವನ್ನಾಗಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಕೇಂದ್ರ ಸರಕಾರ ಮಂಡಿಸಿದೆ.

ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಲು ಗೃಹಸಚಿವ ಅಮಿತ್ ಶಾಗೆ ರಾಜ್ಯಸಭಾ ಅಧ್ಯಕ್ಷರಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ವಿಶೇಷ ಅಧಿಕಾರ ಉಪಯೋಗಿಸಿ ಅನುಮತಿ ನೀಡಿದ್ದರು. ಇದೇವೇಳೆ, ಈ ವಿಷಯದಲ್ಲಿ ರಾಜ್ಯಸಭೆಯಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.

-ಜಮ್ಮು ಕಾಶ್ಮೀರವನ್ನು ಲಡಾಕ್, ಜಮ್ಮುಕಾಶ್ಮೀರವನ್ನಾಗಿ ವಿಭಜಿಸಲಾಗಿದೆ. ಜಮ್ಮುಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಇಲ್ಲ. ಆದರೆ ದಿಲ್ಲಿ ಮಾದರಿಯಲ್ಲಿ ವಿಧಾನಸಭೆ ಇರಲಿದೆ.
ಲಡಾಕ್‍ನಲ್ಲಿ ವಿಧಾನಸಭೆ ಇಲ್ಲ.

ಅಚ್ಚರಿಯ ಬೆಳವಣಿಗೆ ಎಂಬಂತೆ, ಬಿಎಸ್ಪಿಯು ಮಸೂದೆಯನ್ನು ಬೆಂಬಲಿಸಿದೆ. ಸಂವಿಧಾನವನ್ನು ಹರಿದ ಇಬ್ಬರು ಪಿಡಿಪಿ ಸದಸ್ಯರನ್ನು ರಾಜ್ಯಸಭೆಯಿಂದ ಹೊರಹಾಕಲಾಯಿತು. ಬಿಜೆಪಿ ಸಂವಿಧಾನ ಅಂತ್ಯ ಹಾಡಿದೆ ಎಂದು ಗುಲಾಂ ನಬಿ ಆಝಾದ್ ಹೇಳಿದ್ದರೆ ಮತ್ತು ಕೇಂದ್ರ ಸರಕಾರ ಕ್ರಮವು ಕಾಶ್ಮೀರನ್ನು ಇನ್ನಷ್ಟು ಒಂಟಿಗೊಳಿಸುವುದಾಗಿದೆ ಎಂದು ಮೆಹಬೂಬ ಮುಫ್ತಿ ಹೇಳಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಸರ್ವಪಕ್ಷ ಸಭೆ ಕರೆಯಲಿದ್ದಾರೆ ಎಂಬ ವರದಿಯೂ ಬಂದಿದ್ದು, ಪಂಜಾಬ್, ಹರಿಯಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.