ಪ್ರಧಾನಿ ಮೋದಿ ಬಹುಮುಖ ಪ್ರತಿಭೆ: ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶ

0
1111

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 22: ಪ್ರಧಾನಿ ನರೇಂದ್ರ ಮೋದಿಯನ್ನು ಸುಪ್ರೀಂಕೋರ್ಟಿನ ನ್ಯಾಯಾಧೀಶ ಅರುಣ್ ಮಿಶ್ರ ಹೊಗಳಿದ್ದಾರೆ. ಸುಪ್ರೀಂ ಕೋರ್ಟಿನ ಅಂತಾರಾಷ್ಟ್ರೀಯ ಜ್ಯುಡಿಷಿಯಲ್ ಕಾನ್ಫರೆನ್ಸ್ ನಲ್ಲಿ ಬದಲಾಗುತ್ತಿರುವ ಲೋಕ, ನ್ಯಾಯಾಂಗ ವಿಷಯದಲ್ಲಿ ಎಂಬ ವಿಷಯದ ಮೇಲೆ ಮಾತಾಡುತ್ತಾ ಅವರು ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ.

ಮನುಷ್ಯರ ಅಂತಸ್ತಿನ ಅಸ್ತಿತ್ವ ನಮ್ಮ ಪ್ರಥಮ ಪರಿಗಣನೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತಿಸಿ, ಸ್ಥಳೀಯ ರೀತಿಯಲ್ಲಿ ಕೆಲಸ ಮಾಡುತ್ತಿರುವ ಮೋದಿ ಬಹುಮುಖ ಪ್ರತಿಭೆ. ಅವರಿಗೆ ನಾವು ಕೃತಜ್ಞರಾಗಿದ್ದೇವೆ” ಎಂದು ಅರುಣ್ ಮಿಶ್ರ ಹೇಳಿದರು.

1500ಕ್ಕೂ ಹೆಚ್ಚು ಕಾನೂನು ನಿರ್ಮಿಸಿದ ನರೇಂದ್ರ ಮೋದಿ ಮತ್ತು ಕಾನೂನು ಮಂತ್ರಿ ರವಿಶಂಕರ್ ಪ್ರಸಾದ್‍ರನ್ನು ನಾನು ಅಭಿನಂದಿಸುತ್ತೇನೆ. ಮೋದಿಯ ಅಧೀನದಲ್ಲಿ ಭಾರತ ಅಂತಾರಾಷ್ಟ್ರ ಸಮುದಾಯದ ನಡುವೆ ಜವಾಬ್ದಾರ ಮತ್ತು ಸೌಹಾರ್ದ ದೇಶವಾಗಿ ಬದಲಾಗಿದೆ” ಎಂದವರು ಹೇಳಿದ್ದಾರೆ.

ಲೋಕದ ಅತಿದೊಡ್ಡ ಪ್ರಜಾಪ್ರಭುತ್ವ ಯಶಸ್ವಿಯಾಗಿ ಕಾರ್ಯವೆಸಗುವುದು ಎಲ್ಲರಿಗೂ ಆಶ್ಚರ್ಯ ತರಿಸುವ ವಿಚಾರವಾಗಿದೆ. ಭಯೋತ್ಪಾದನೆ ಮುಕ್ತ ಶಾಂತಿ, ಸುಶಿಕ್ಷಿತ ಲೋಕಕ್ಕಾಗಿ ಭಾರತ ಪ್ರತಿಜ್ಞಾಬದ್ಧವಾಗಿದೆ. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಸುಪ್ರೀಂಕೋರ್ಟಿನ ಹಿರಿತನದಲ್ಲಿ ಅರುಣ್ ಮಿಶ್ರ ಮೂರನೇ ಸ್ಥಾನದಲ್ಲಿದ್ದಾರೆ. ಸುಪ್ರೀಂಕೋರ್ಟು ಸಂಘಟಿಸುತ್ತಿರುವ ಅಂತಾರಾಷ್ಟ್ರೀಯ ಜ್ಯುಡಿಶ್ಯಲ್ ಕಾನ್ಫರೆನ್ಸ್ ಅನ್ನು ಪ್ರಧಾನಿ ಉದ್ಘಾಟಿಸಿದರು. ವಿದೇಶಗಳಿಂದ ನ್ಯಾಯಾಧೀಶರು ಕಾನ್ಫರೆನ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ.