ರಾಮಮಂದಿರಕ್ಕಾಗಿ ಹೋರಾಡಿದವರಿಗೆ ಸ್ಮಾರಕ ಅಗತ್ಯವಿದೆ- ಶಿವಸೇನೆ

0
391

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 21: ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಡಿ ಮೃತಪಟ್ಟವರ ನೆನಪಿಗಾಗಿ ಸ್ಮಾರಕ ಅಗತ್ಯವಿದೆ ಎಂದು ಶಿವಸೇನೆ ಹೇಳಿದೆ. ಅಮರ್ ಜವಾನ್ ಜ್ಯೋತಿಯ ಮಾದರಿಯಲ್ಲಿ ಅಯೋಧ್ಯೆಯಲ್ಲಿ ಸ್ಮಾರಕ ಅಗತ್ಯವಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಆಗ್ರಹಿಸಲಾಗಿದೆ. ರಾಮಮಂದಿರಕ್ಕಾಗಿ ಹಲವರು ಮಂದಿ ಹುತಾತ್ಮರಾಗಿದ್ದಾರೆ. ಅಮರ್ ಜವಾನ್ ಜ್ಯೋತಿಯಂತೆ ರಾಮಮಂದಿರಕ್ಕಾಗಿ ಮೃತಪಟ್ಟವರ ಹೆಸರಗಳ ಸ್ಮಾರಕ ಬರೆಯಬೇಕು. ಸರಯೂ ನದಿಯ ತೀರದಲ್ಲಿ ಸ್ಮಾರಕ ಇರಬೇಕಾಗಿದೆ.

ರಾಮಮಂದಿರಕ್ಕಾಗಿ ಕೆಲಸ ಮಾಡಿದ ಶಿವಸೇನೆ ಸಹಿತ ಹಿಂದೂ ಸಂಘಟನೆಗಳನ್ನು ಸನ್ಮಾನಿಸಬೇಕಾಗಿದೆ. ರಾಮಮಂದಿರ ಹೋರಾಟದ ಮುಂಚೂಣಿಯಲ್ಲಿ ಶಿವಸೇನೆ ಇತ್ತು. ಅದನ್ನು ರಾಜಕೀಯ ಲಾಭಕ್ಕಾಗಿ ಶಿವಸೇನೆ ಉಪಯೋಗಿಸಿಲ್ಲ. ಆದರೆ, ಬಿಜೆಪಿ ರಾಮಮಂದರ ಹೋರಾಟಗಳನ್ನು ರಾಜಕೀಯ ಲಾಭಕ್ಕಾಗಿ ಉಪಯೋಗಿಸಿದೆ. ರಾಮಮಂದಿರದ ಭೂಮಿ ಪೂಜೆಗೆ ಬಿಜೆಪಿ ನಾಯಕರನ್ನು ಮಾತ್ರ ಕರೆದರೆ ಸಾಲದು ಎಂದು ಸಾಮ್ನಾ ಹೇಳಿದೆ.