ರವಿವಾರ ಕೇರಳದಲ್ಲಿ ಹರತಾಳ: ದಲಿತ ಸಂಯುಕ್ತ ಸಮಿತಿ

0
693

ಸನ್ಮಾರ್ಗ ವಾರ್ತೆ

ಕೋಟ್ಟಯಂ, ಫೆ. 22: ಭಾರತ್ ಬಂದ್ ಅನ್ನು ಬೆಂಬಲಿಸಿ ದಲಿತ ಸಂಯುಕ್ತ ಸಮಿತಿ ಹರತಾಳಕ್ಕೆ ಕರೆ ನೀಡಿದೆ. ರವಿವಾರ ಕೇರಳದಲ್ಲಿ ಹರತಾಳ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಇರಲಿದೆ. ಹಾಲು, ಪತ್ರಿಕೆ, ಮೆಡಿಕಲ್ ಶಾಪ್, ಆಂಬ್ಯುಲೆನ್ಸ್‍ ಸೇವೆ. ಮದುವೆ ವಾಹನಗಳಿಗೆ ಹರತಾಳದಿಂದ ವಿನಾಯಿತಿ ನೀಡಲಾಗಿದೆ ಎಂದು ಸಂಯುಕ್ತ ಸಮಿತಿ ಅಧ್ಯಕ್ಷ ಎ.ಕೆ. ಸಜೀವ್, ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಪಿ.ಒ. ಜಾನ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸರಕಾರಿ ಕೆಲಸದ ಭಡ್ತಿಗೆ ಮೀಸಲಾತಿ ಮೂಲಭೂತ ಹಕ್ಕು ಅಲ್ಲವೆಂದು ಕೋರ್ಟು ತೀರ್ಪನ್ನು ವಿರೋಧಿಸಿ ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಝಾದ್ ಭಾರತ ಬಂದ್‍ಗೆ ಕರೆನೀಡಿದ್ದಾರೆ. ಜಸ್ಟಿಸ್ ನಾಗೇಶ್ವರ ರಾವ್ ಅಧ್ಯಕ್ಷತೆಯ ಪೀಠ ನೀಡಿರುವ ತೀರ್ಪು ಸಂವಿಧಾನ ವಿರೋಧಿಯಾಗಿದ್ದು ತಪ್ಪು ಸರಿಪಡಿಸಿಕೊಳ್ಳಬೇಕೆಂದು ಆಗ್ರಹಿಸಿ ಆಝಾದ್ ಬಂದ್‍ಗೆ ಕರೆ ನೀಡಿದ್ದಾರೆ.

ಕೇರಳದ ದಲಿತ ಸಂಘಟನೆಗಳಾದ ಆದಿವಾಸಿ ಗೋತ್ರ ಮಹಾಸಭಾ, ಕೆಡಿ ಪಿ. ಬೀಮ್ ಆರ್ಮಿ, ಕೆಸಿಎಸ್, ಎಚ್‍ಆರ್‍ಎಂ, ಎಕೆಸಿಎಚ್‍ಎಂಎಸ್, ಪ್ರಜಾಪ್ರಭುತ್ವ ರಾಷ್ಟ್ರೀಯ ಆಂದೋಲನ ಕೆಪಿಎಂಎಸ್, ಸಾಧುಜನ ಪರಿಪಾನ ಸಂಘ, ಎಎಸ್‍ಫೋರ್, ಎನ್‍ಡಿಎಲ್ ಎಫ್ ಹರತಾಳಕ್ಕೆ ಕರೆ ನೀಡಿದೆ.