ಜಮಾಅತ್ ಚಟುವಟಿಕೆಯಲ್ಲಿ ಸದಾ ಸಕ್ರಿಯರಾಗಿದ್ದ ಅಶ್ರಫ್ ಕಲ್ಲಾಡಿ: ಸ್ಮರಣೆ

0
131

ಸನ್ಮಾರ್ಗ ವಾರ್ತೆ

✍️ ಮುಸ್ತಫಾ ಇರುವೈಲ್

ಮರಣದ ರುಚಿಯನ್ನು ಪ್ರತಿಯೊಬ್ಬರೂ ಅನುಭವಿಸಲೇಬೇಕು, ಹುಟ್ಟಿದ ಪ್ರತಿಯೊಬ್ಬರಿಗೂ ಅದು ಅನ್ವಯ, ಅದರ ಹೊರತಾಗಿ ಗೆಳೆಯ ಅಶ್ರಫ್ ಅವರ ಮರಣದ ಸುದ್ದಿಯನ್ನು ಕಿವಿಗಳಿಂದ ಕೇಳುವುದು ಅದಕ್ಕೆ ಪ್ರತಿಕ್ರಯಿಸುವುದು ಅಷ್ಟು ಸುಲಭವಾಗಿರಲಿಲ್ಲ. ಜಮಾಅತೆ ಇಸ್ಲಾಮಿ ಕಲ್ಲಾಡಿ, ಕುಪ್ಪೆಪದವಿನಲ್ಲಿ ಆರಂಭಗೊಂಡ ಕಾಲದಿಂದಲೂ ಅಶ್ರಫ್ ಸಕ್ರೀಯವಾಗಿ ಪಾಲ್ಗೊಂಡವರು. ನಾವುಗಳು ಚಿಲ್ಡ್ರನ್ ಸರ್ಕಲ್ ನಲ್ಲಿ ವಾರದ ತರಬೇತಿ ಸಭೆಯಲ್ಲಿ ಭಾಗವಹಿಸುತ್ತಿದ್ದಾಗ ಅವರು ನಗುವಿನಂದಲೇ ಬೆರೆಯುತ್ತಿದ್ದರು. ಎಸ್ ಐ ಒ ಕಲ್ಲಾಡಿ ಪ್ರದೇಶದಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಜೊತೆಯಿದ್ದರು, ಬೆಂಗಳೂರಿನಲ್ಲಿ ಪ್ರಿಂಟಿಂಗ್ ವ್ರತ್ತಿಯಲ್ಲಿ ತೊಡಗಿಸಿಕೊಂಡ ಕಾರಣ ಅಶ್ರಫ್ ರಾಜ್ಯ ಎಸ್ ಐ ಒ ನೊಂದಿಗೆ ಕೂಡಾ ನಿಕಟ ಸಂಪರ್ಕ ಹೊಂದಿದ್ದರು ಮತ್ತು ರಾಜ್ಯ ಜಮಾಅತೆ ಇಸ್ಲಾಮಿ ನಾಯಕರೊಂದಿಗೆ ಕೂಡಾ ಆತ್ಮೀಯರಾಗಿದ್ದರು.

ಇಂದು ಕುಪ್ಪೆಪದವಿನಲ್ಲಿ ಇರುವ ಹಮ್ದ್ ಸೆಂಟರ್ ನಿರ್ಮಾಣಕ್ಕಿಂತ ಮೊದಲು ಅಂತಹದೊಂದು ಸೆಂಟರ್ ಬೇಕೆಂಬ ಬಯಕೆ ಇದ್ದಾಗಲೆ ಅದರ ಜಾಗ ಖರೀದಿ‌‌‌‌ ವಿಷಯದಲ್ಲಿ ಬೆಂಗಳೂರಿನಲ್ಲಿ ಕಲೆಕ್ಷನ್ ‌ಮಾಡುವ ವಿಚಾರದಲ್ಲಿ ಅವರ ಸಂಪರ್ಕದಲ್ಲಿ ಇದ್ದವರನ್ನೆಲ್ಲಾ ಭೇಟಿ ಮಾಡಿ ಆ ಕಾರ್ಯದಲ್ಲಿ ಮುತವರ್ಜಿ ವಹಿಸಿದ್ದರು. ಸನ್ಮಾರ್ಗ, ಅನುಪಮದ ಚಂದಾದಾರರನ್ನು ಮಾಡುವ ವಾರ್ಷಿಕ ಅಭಿಯಾನದಲ್ಲಿ ಸಕ್ರೀಯವಾಗಿದ್ದರು, ನಾವು ಯಾವುದು ಸಾಧ್ಯವಿಲ್ಲ ಎಂದು ತಿಳಿದು ಹಿಂಜರಿಯುತ್ತಿದ್ದೆವೋ ಅದರಲ್ಲಿ ಅಶ್ರಫ್ ಸದಾ ಒಂದಡಿ ಮುಂದಿನ ಹೆಜ್ಜೆಯಲ್ಲೆ ಇದ್ದರು.

ವೆಲ್ಪೇರ್ ಪಾರ್ಟಿ ಆರಂಭ ಕಾಲದಿಂದ ಅದರ ಜೊತೆಗೆ ನಿಂತಿದ್ದರು, ರಾಜ್ಯ ಮತ್ತು ಜಿಲ್ಲಾ ವೆಲ್ಪೇರ್ ಪಾರ್ಟಿ ಯ ಕೆಲಸಗಳಲ್ಲಿ ನಿಕಟ ಸಂಪರ್ಕ ಹೊಂದಿದ್ದರು. HRS ನ ಎಲ್ಲಾ ಕೆಲಸಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು.

ಸಾಮಾಜಿಕ ಕೆಲಸದ ಎಲ್ಲಾ ಕಾರ್ಯಗಳಲ್ಲಿ ನಿರತರು ಅನುಭವಿ ಕೂಡಾ ಆಗಿದ್ದರು, ಒಳ್ಳೆಯ ಈಜುಪಟುವಾಗಿದ್ದ ಆಶ್ರಪ್ ಹಲವಾರು ಮಂದಿಗೆ ಈಜು ಕೂಡಾ ಕಲಿಸಿದ್ದರು. ಸಾಹಸಮಯ ವಿಷಯಗಳಲ್ಲಿ ಆಸಕ್ತಿ ಹೆಚ್ಚು ಹೊಂದಿದ್ದ ವ್ಯಕ್ತಿಯಾಗಿದ್ದರು. ಕಲ್ಲಾಡಿ, ಕುಪ್ಪೆಪದವು ಪರಿಸರದಲ್ಲಿ ಎಲ್ಲಾ ಸಾಮಾಜಿಕ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಿದ್ದ ವ್ಯಕ್ತಿ. ಬಾರ್ದಿಲ,‌ಕಲ್ಲಾಡಿ, ಕೇಂದ್ರೀಕರಿಸಿ ನಾವು ನಡೆಸುತ್ತಿರುವ ಉಮ್ಮಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಕಾರ್ಯದರ್ಶಿಯಾಗಿ ಅದರ ಟ್ರಸ್ಟ್ ರಿಜಿಷ್ಟೇಷನ್ ಸಮಯಕ್ಕೆ ಸರಿಯಾಗಿ ಮತ್ತು ವೇಗವಾಗಿ ನಡೆಸಿಕೊಟ್ಟಿದ್ದರು. ಕಲ್ಲಾಡಿ, ಎಡಪದವು ಜಮಾತೆ ಇಸ್ಲಾಮಿ ತಂಡ ಎಲ್ಲಾದರು ವಾಲೆಂಟರ್ ಕೆಲಸ ನಡೆಸಿದರೆ, ಸಾಮಾಜಿಕ ಕೆಲಸದಲ್ಲಿ ಭಾಗವಹಿಸಿದರೆ ಅಲ್ಲಿ ಅಶ್ರಫ್ ಭಾಗವಹಿಸುವಿಕೆ ಇಲ್ಲದೇ ಇರುತ್ತಿದ್ದದ್ದು ಬಹಳ ಕಡಿಮೆ, ಹೀಗೆ ನೂರಾರು ಮಾತುಗಳು ಮೃತರ ಬಗ್ಗೆ ಇದೆ.

ಪ್ರಿಂಟಿಂಗ್ ವಲಯದಲ್ಲಿ ಹೆಚ್ಚು ಕೆಲಸ ಮಾಡಿದ್ದ ಅಶ್ರಪ್ ಇತ್ತೀಚೆಗೆ ಟ್ರಾವಲ್ಸ್ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರು, ಉಮ್ರಾ ಪ್ಯಾಕೆಜ್ ನಡೆಸುತ್ತಿದ್ದು, ಉಮ್ರಾ ತಂಡಕ್ಕೆ ನೇತ್ರತ್ವ ನೀಡಿ ಉಮ್ರಾ ಕೂಡ ‌ನಿರ್ವಹಿಸಿದ್ದರು, ಕ್ರಷಿಯಲ್ಲಿ ಆಶಕ್ತಿ ಹೊಂದಿದ್ದು ಮನೆಯ ಪರಿಸರದಲ್ಲಿ ಹೆಚ್ಚು ಕೆಲಸ ಕೂಡಾ ನಿರ್ವಹಿಸುತ್ತಿದ್ದರು.

ಅಶ್ರಫ್ ಎಂದರೆ ಅಲ್ಲಿ ನಗು ಇದ್ದೇ ಇರುತ್ತದೆ ಇಂದು ಆ ನಗು ಶಾಂತವಾಗಿದೆ ನಮ್ಮನ್ನೆಲ್ಲಾ ಕಣ್ಣೀರಿನಲ್ಲಿ ಮುಳುಗಿಸಿದೆ, ಜೀವನವೇ ಹಾಗೆ ನೋವುಗಳು ಬರುತ್ತಲೆ ಇರುತ್ತದೆ. ಅಶ್ರಫ್ ಸದಾ ಹೇಳುತ್ತಿದ್ದ ಮಾತುಗಳು ಇದೆ. ಶಹಾದತ್ ಸಿಕ್ಕಿದವರು ಅದೆಷ್ಟು ಭಾಗ್ಯವಂತರು ಎಂದು ಇಂದು ಅದೇ ರೀತಿ ಅಪಘಾತ ಸಂಭವಿಸುವಾಗ ಅದನ್ನು ತಪ್ಪಿಸಲು ಹರಸಾಹಸ ಪಟ್ಟಿದ್ದಾರೆ, ಅಲ್ಲಾಹನು ಅವರ ಒಳ್ಳೆಯ ಕೆಲಸಗಳನ್ನು ಒಳ್ಳೆಯ ಮನಸ್ಸನ್ನು ಸ್ವಿಕರಿಸಿ, ಅವರ ಚಿಕ್ಕ ಮಕ್ಕಳು ಮತ್ತು ಕುಟುಂಬದವರಿಗೆ ಸಾಂತ್ವಾನ ನೀಡಲಿ, ಜನ್ನಾತುಲ್ ಪಿರ್ದೌಸ್ ನೀಡಿ ಅನುಗ್ರಹಿಸಿಲಿ.