1500 ವರ್ಷ ಮೊದಲೇ ಇಸ್ಲಾಂ ಮಹಿಳೆಯರಿಗೆ ಸಮಾನ ಹಕ್ಕು ನೀಡಿದೆ; ಆಝಂ ಖಾನ್

0
742

ಹೊಸದಿಲ್ಲಿ, ಜೂ. 21: ಸಮಾಜವಾದಿ ಪಾರ್ಟಿ ಸಂಸದ ಆಝಂ ಖಾನ್ ತ್ರಿವಳಿ ತಲಾಕ್ ಮಸೂದೆಯನ್ನು ವಿರೋಧಿಸುತ್ತಾ ಇಸ್ಲಾಮ್‍ ಗಿಂತ ಮಹಿಳೆಯರಿಗೆ ಹೆಚ್ಚು ಹಕ್ಕನ್ನು ಯಾರು ಕೊಟ್ಟಿದ್ದಾರೆ? ಇಸ್ಲಾಮ್ 1500 ವರ್ಷ ಮೊದಲೇ ಮಹಿಳೆಯರಿಗೆ ಸಮಾನ ಹಕ್ಕನ್ನು ಕೊಟ್ಟಿದೆ. ಮುಸ್ಲಿಮರಲ್ಲಿ ಮಹಿಳೆಯರನ್ನು ಕೊಲ್ಲುವುದಿಲ್ಲ ಮತ್ತು ಸುಟ್ಟು ಹಾಕುವುದಿಲ್ಲ ಎಂದು ಆಝಂ ಖಾನ್ ಹೇಳಿದರು.

ಇಂದು ಮಂಡಿಸಲಾದ ತ್ರಿವಳಿ ತಲಾಕ್ ಮಸೂದೆಯನ್ನು ವಿರೋಧಿಸಿ ಹೀಗೆ ಪ್ರತಿಕ್ರಿಯಿಸಿದ್ದಾರೆ. ಕಳೆದ ತಿಂಗಳು ಹದಿನಾರನೆ ಲೋಕಸಭೆಯ ಅವಧಿ ಮುಗಿದದ್ದರಿಂದ ಹಿಂದೆ ಮಂಡಿಸಿದ್ದ ತ್ರಿವಳಿ ತಲಾಕ್ ಮಸೂದೆ ನಿಷ್ಕ್ರಿಯವಾಗಿತ್ತು. ಆದ್ದರಿಂದ ಮೋದಿ ಸರಕಾರ ಹೊಸದಾಗಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ. 2018 ಮತ್ತು 2019ರಲ್ಲಿ ತ್ರಿವಳಿ ತಲಾಕ್ ಸುಗ್ರಿವಾಜ್ಞೆ ಹೊರಡಿಸಿತ್ತು. ಮಸೂದೆ ರಾಜ್ಯಸಭೆಯಲ್ಲಿ ಪಾಸು ಆಗಿರಲಿಲ್ಲ. ಆದ್ದರಿಂದ ಸರಕಾರ ಸುಗ್ರೀವಾಜ್ಞೆ ತಂದಿತ್ತು.

ಲೋಕಸಭೆಯಲ್ಲಿ ಮಂಡಿಸಲಾಗಿರುವ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ಸಂರಕ್ಷಣೆ ಮಸೂದೆಯ ಪ್ರಕಾರ ತ್ರಿವಳಿ ತಲಾಕ್ ಕಾನೂನು ಬಾಹಿರವಾಗಿದೆ. ಪತಿಯಾದವನು ತ್ರಿವಳಿ ತಲಾಕ್ ನೀಡಿದರೆ ಆತನನ್ನು ಬಂಧಿಸಿ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು.