ಅಸ್ಸಾಂ: ಬಿಜೆಪಿ ಶಾಸಕನ ವಾಹನದಲ್ಲಿ ಇವಿಎಂ ಪತ್ತೆ; ಚುನಾವಣಾ ಫಲಿತಾಂಶ ಬುಡಮೇಲು ಮಾಡುವ ಯತ್ನವಿದು

0
710

ಸನ್ಮಾರ್ಗ ವಾರ್ತೆ

ದಿಸ್‍ಪುರ: ಅಸ್ಸಾಮಿನ ಎರಡನೆ ಹಂತದ ಚುನಾವಣೆ ನಡೆದು ಕೆಲವು ಗಂಟೆಗಳಲ್ಲಿ ಬಿಜೆಪಿ ಶಾಸಕ ಮತಯಂತ್ರ ತೆಗೆದುಕೊಂಡು ಹೋಗಿ ಸಿಕ್ಕಿಬಿದ್ದಿದ್ದಾರೆ. ಪಾತಾರ್ಕಂಡಿ ಬಿಜೆಪಿ ಶಾಸಕ ಎ.ಕೃಷ್ಣೇಂದು ಪಾಲ್‍ರ ಕಾರಿನಲ್ಲಿ ಮತಯಂತ್ರ ಪತ್ತೆಯಾಗಿದೆ. ಅಸ್ಸಾಂ ಪತ್ರಕರ್ತ ಅದಾನು ಭೂಯಾನ್ ಘಟನೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಪಾತಾರ್ ಕಂಡಿಯ ಅವ್ಯವಸ್ಥೆ ಎಂದು ಅವರು ವೀಡಿಯೊ ಹಂಚಿಕೊಂಡು ಬರೆದಿದ್ದಾರೆ. AS10B0022 ನೋಂದಣಿ ನಂಬ್ರದ ಬಿಳಿ ಸ್ಕಾರ್ಪಿಯೊದಲ್ಲಿ ಪೆಟ್ಟಿಯೊಳಗೆ ಇವಿಎಂ ಮೆಶಿನ್ನು ಇಡಲಾಗಿತ್ತು. ಇದನ್ನು ವೀಡಿಯೊದಲ್ಲಿ ನೋಡಬಹುದು. ಇದು ಶಾಸಕರ ಕಾರು ಎಂದು ಅಲ್ಲಿ ಸೇರಿದ ಜನರು ಹೇಳುತ್ತಿರುವುದು ಕೂಡ ವೀಡಿಯೊದಲ್ಲಿ ಕೇಳಿಸುತ್ತಿದೆ.

ಚುನಾವಣಾ ಫಲಿತಾಂಶವನ್ನು ಬುಡಮೇಲುಗೊಳಿಸಲು ಬಿಜೆಪಿ ಯತ್ನಿಸಿರುವುದಕ್ಕೆ ಇದೊಂದು ಪುರಾವೆಯೆಂದು ಕಾಂಗ್ರೆಸ್ ಆರೋಪಿಸಿದೆ. ಸಂಸದರ ಸಹಿತ ಹಲವು ನಾಯಕರು ಘಟನೆಯನ್ನು ವಿರೋಧಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಚುನಾವಣೆ ಆಯೋಗ ಬಿಜೆಪಿಯ ಕಿಸೆಯಲ್ಲಿದೆ ಎಂಬುದು ಗೊತ್ತಿದೆ. ಆದರೆ ವೋಟಿಂಗ್ ಮೆಷಿನ್ ಅವರ ಮಡಿಲಲ್ಲಿದೆ ಎನ್ನವುದು ಹೊಸ ಆತಂಕ ಹುಟ್ಟುಹಾಕುತ್ತಿದೆ. ಇದರಲ್ಲಿ ಎಲ್ಲಿದೆ ಪ್ರಜಾಪ್ರಭುತ್ವ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿಗೆ ಅನುಕೂಲಕರವಾಗಿ ಚುನಾವಣಾ ಆಯೋಗ ವರ್ತಿಸುತ್ತಿದೆ ಇದರ ವಿರುದ್ಧ ದೇಶಾದ್ಯಂತ ಪ್ರತಿರೋಧ ಬಲಗೊಂಡಿದೆ. ಘಟನೆಯಲ್ಲಿ ಬಿಜೆಪಿ ಅಥವಾ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿಲ್ಲ.