ಸನ್ಮಾರ್ಗ ವಾರ್ತೆ
ಗುವಾಹಟಿ: ದೇಶದ ಪೌರತ್ವ ಎನ್‍ಸಿಆರ್‌ನಲ್ಲು ಹೆಸರು ಬಂದರೂ ಭಾರತದ ಪೌರತ್ವ ಸಾಬೀತು ಪಡಿಸಲು ವಿದೇಶ ಟ್ರಿಬ್ಯೂನಲ್‍ನಲ್ಲಿ ಹೋರಾಟ ನಡೆಸಿದ ಅಸ್ಸಾಮಿನ ಮೊರಿಗಾವ್ ಜಿಲ್ಲೆಯ ನಿವಾಸಿ ಮಾಣಿಕ್ ದಾಸ್(60 ವ)ರ ಮೃತದೇಹವು ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಂಕಿಸಲಾಗಿದೆ. ಇಲ್ಲಿನ ಜಆಗಿ ರೋಡಿನ ಮಾರುಕಟ್ಟೆಯಲ್ಲಿ ಅವರು ವ್ಯಾಪಾರ ಮಾಡುತ್ತಿದ್ದರು.
ಹಲವು ವರ್ಷಗಳಿಂದ ಕೇಸು ನಡೆಯುತಿದೆ. ಯಾಕೆ ಪೊಲೀಸರು ಅವರಿಗೆ ನೋಟಿಸು ಕಳುಹಿಸಿ ಕೇಸು ಹಾಕಿದ್ದೆಂದು ಗೊತ್ತಿಲ್ಲ. ಎನ್‍ಆರ್‌ಸಿಯಲ್ಲಿ ತಂದೆಯ ಮತ್ತು ನಮ್ಮ ಹೆಸರಿದೆ. ನಿರಾಸರಾಗಿದ್ದ ಅವರು ತುಂಬ ಮಾನಸಿಕವಾಗಿ ಬಳಲಿದ್ದರು ಎಂದು ದಾಸ್‍ರ ಅಪ್ರಾಪ್ತ ವಯಸ್ಸಿನ ಮಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
2019ರಲ್ಲಿ ಆಗಸ್ಟ್‌ನಲ್ಲಿ ಅಸ್ಸಾಂ ಎನ್‍ಆರ್‌ಸಿ ಪ್ರಕಟಿಸಿದ ತಿಂಗಳ ಬಳಿಕ ಅವರನ್ನು ಬಾಂಗ್ಲಾದೇಶಿ ಎಂಬುದಾಗಿ 2019 ನವೆಂಬರ್ 20ಕ್ಕೆ ದಾಸ್‍ರಿಗೆ ಫಾರಿನರ್ಸ್ ಟ್ರಿಬ್ಯೂನಲ್ ನೋಟಿಸು ಕಳುಹಿಸಿತ್ತು. ಅದರಲ್ಲಿ ದಾಸ್ ಮತ್ತು ಕುಟುಂಬದ ಹೆಸರು ಸೇರ್ಪಡೆಯಾಗಿರಲಿಲ್ಲ. ತಂದೆಯ ಹೆಸರಿನಲ್ಲಿ ಪಾನ್ ಕಾರ್ಡ್, ಆಧಾರ್ ಕಾರ್ಡ್, ಜಮೀನು ದಾಖಲೆಗಳೂ ಇದ್ದು ಎಲ್ಲವೂ ಕಾನೂನು ಬದ್ಧವಾಗಿದೆ. ಇದರಲ್ಲಿ ಗುರುತಿನ ಚೀಟಿಯೂ ಇತ್ತು ಎಂದು ಮಗಳು ತಿಳಿಸಿದಳು.
ದಾಸ್ ರವಿವಾರ ಕಾಣೆಯಾಗಿದ್ದರು. ಮಂಗಳವಾರ ಸಂಜೆ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ಅಸಹಜ ಸಾವು ಎಂದು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಪುತ್ರಿಯ ಜೊತೆ ಅವರು ವಾಸವಿದ್ದರು.












