ದ್ವಿತೀಯ ಪಿಯುಸಿ ಪಠ್ಯದಿಂದ ಮಾಜಿ ಪ್ರಧಾನಿ ನೆಹರೂ ಪಾಠವನ್ನು ಸಂಪೂರ್ಣ ಹೊರಗಿಟ್ಟ ಅಸ್ಸಾಂ ಎಜುಕೇಶನ್ ಬೋರ್ಡ್: ಕಾಂಗ್ರೆಸ್‍ನಿಂದ ಪ್ರತಿಭಟನೆ

0
323

ಸನ್ಮಾರ್ಗ ವಾರ್ತೆ

ದಿಸ್ಪುರ: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪಠ್ಯಪುಸ್ತಕದಲ್ಲಿ 3೦% ಪಠ್ಯಗಳನ್ನು ಕಡಿತಗೊಳಿಸಲು ಅಸ್ಸಾಮ್‍ನಲ್ಲಿ ದ್ವಿತೀಯ ಪಿಯುಸಿ ಪಠ್ಯಕ್ರಮದಿಂದ ಜವಾಹರಲಾಲ್ ನೆಹರೂರವರ ಕುರಿತ ಸಂಪೂರ್ಣ ಇತಿಹಾಸ, ಅಯೋಧ್ಯೆ ವಿವಾದ ಹಾಗೂ ಗುಜರಾತ್ ದಂಗೆಗೆ ಸಂಬಂಧಿಸಿ ವಿಷಯಗಳನ್ನು ಹೊರಗಿರಿಸಿದ್ದು ವಿವಾದಕ್ಕೆ ಗುರಿಯಾಗಿದೆ.

ಅಸ್ಸಾಂ ಹೈಯರ್ ಸೆಕಂಡರಿ ಎಜುಕೇಶನ್ ಕೌನ್ಸಿಲ್(ಎಎಚ್‍ಎಸ್‍ಇಸಿ) ಈ ತೀರ್ಮಾನವನ್ನು ಕಯಗೊಂಡಿದ್ದು, ಕೊರೋನದಿಂದ ವಿದ್ಯಾರ್ಥಿಗಳಿಗೆ ಕಲಿಕೆ ಸಮಯ ನಷ್ಟವಾಗಿದೆ ಆದ್ದರಿಂದ ಪಾಠದ ಭಾಗವನ್ನು ಕಡಿತಗೊಳಿಸಲಾಗಿದೆ ಎಂದು ಅದು ಸ್ಪಷ್ಟೀಕರಣ ನೀಡಿದೆ.

ಜವಾಹರಲಾಲ್ ನೆಹರೂರ ನೀತಿ, ಕೊಡುಗೆಗಳನ್ನು ವಿವರಿಸುವ ಪಾಠವನ್ನು ಪಠ್ಯ ಕ್ರಮದಲ್ಲಿ ಉಳಿಸಿಕೊಳ್ಳಲು ಎಎಚ್‍ಎಸ್‌ಇಸಿಗೆ ಸೂಚನೆ ನೀಡಬೇಕೆಂದು ಪ್ರತಿಪಕ್ಷ ನಾಯಕ ದೇಬಬ್ರತ ಸೈಕಿಯ ಮುಖ್ಯಮಂತ್ರಿ ಸರ್ಬಾನಂದ ಸೊನೆವಾಲರಿಗೆ ಪತ್ರ ನೀಡಿದ್ದಾರೆ. ವಿದ್ಯಾರ್ಥಿಗಳ ಕಲಿಕೆ ಭಾರವನ್ನು ಕಡಿಮೆ ಮಾಡುವ ಯಾವ ಹೆಜ್ಜೆಯೂ ಸ್ವಾಗತಾರ್ಹವೇ. ಆದರೆ ತೆಗೆದು ಹಾಕಿರುವ ಪಾಠಭಾಗಗಳ ಆಯ್ಕೆ ಪ್ರಶ್ನಾರ್ಹವಾಗಿದೆ ಎಂದು ಸೈಕಿಯಾ ಹೇಳಿದ್ದಾರೆ.

ಶೀತಲ ಯುದ್ಧ ಕಾಲದಲ್ಲಿ ಆಲಿಪ್ತ ನೀತಿಯೊಂದಿಗೆ ನೆಹರೂ ಜಗತ್ತಿನ ಗೌರವ ಪಡೆದಿದ್ದರು. ದೇಶದ ಉನ್ನತಿ, ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಲು ಜವಾಹರಲಾಲ್ ನೀಡಿದ ಕೊಡುಗೆ ಅಪಾರವಾದುದು. ಇದನ್ನು ರಾಜಕೀಯ ಪ್ರತಿಸ್ಪರ್ಧಿ ಅಟಲ್ ಬಿಹಾರಿ ವಾಜಪೇಯಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂತಾದವರು ಬಹಿರಂಗವಾಗಿ ಸಮ್ಮತಿಸಿದ್ದಾರೆ ಎಂದು ಸೈಕಿಯಾ ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.