ಅಮೇರಿಕ: 10 ವರ್ಷಗಳಿಂದ ಟ್ರಂಪ್ ಆದಾಯ ತೆರಿಗೆ ಕಟ್ಟಿಲ್ಲ!

0
430

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ. 28: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಪಡೆದಿದ್ದ 2016ರಲ್ಲಿ ಡೊನಾಲ್ಡ್ ಟ್ರಂಪ್ ಆದಾಯ ತೆರಿಗೆ ವಿಭಾಗದಲ್ಲಿ 750 ಡಾಲರ್ ಮಾತ್ರ ಪಾವತಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಬೃಹತ್ ಉದ್ಯಮಿಯಾದ ಟ್ರಂಪ್ ಇದಕ್ಕಿಂತ ಮುಂಚಿನ ವರ್ಷಗಳಲ್ಲಿ ತೆರಿಗೆ ಕಟ್ಟಿಲ್ಲ. ಇಪ್ಪತ್ತಕ್ಕಿಂತಲೂ ಹೆಚ್ಚು ವರ್ಷದ ತೆರಿಗೆ ರಿಟರ್ನ್ ಡಾಟ ಉದ್ಧರಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತು.

ಕಳೆದ 15 ವರ್ಷಗಳೊಳಗೆ ಹತ್ತು ವರ್ಷದಲ್ಲಿ ಟ್ರಂಪ್ ಆದಾಯ ತೆರಿಗೆ ಪಾವತಿಸಿಲ್ಲ. 2016, 2017ರಲ್ಲಿ 750 ಡಾಲರ್ ತೆರಿಗೆ ಮಾತ್ರ ಕಟ್ಟಿದ್ದಾರೆ. ಲಾಭಕ್ಕಿಂತ ಹೆಚ್ಚು ನಷ್ಟವಾಗಿದೆ ಎಂದು ಟ್ರಂಪ್ ಈ ರೀತಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

2015ರಲ್ಲಿ ಟ್ರಂಪ್ ಆರ್ಥಿಕ ಆಡಿಟ್ ಮಾಡಿದರೂ ವಿವರಗಳನ್ನು ಬಹಿರಂಗಗೊಳಿಸಿಲ್ಲ. ಟ್ರಂಪ್ ಅಧ್ಯಕ್ಷರಾಗಿರುವಾಗಲೇ ಹಲವಾರು ಉದ್ಯಮ ನಿರ್ವಹಿಸುತ್ತಿದ್ದಾರೆ. ಆದರೆ, ಕ್ರಮೇಣ ಬಿಸಿನೆಸ್ ಹೊಣೆಗಾರಿಕೆಯನ್ನು ಮಕ್ಕಳಾದ ಎರಿಕ್‍ಗೂ ಡೊನಾಲ್ಡ್ ಜೂನಿಯರ್‌ಗೂ ವಹಿಸುತ್ತಿರುವೆನೆಂದು ಟ್ರಂಪ್ ಹೇಳುತ್ತಿದ್ದಾರೆ.

2016ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತು ನಂತರ ಅಧಿಕಾರಕ್ಕೆ ಬಂದ ಬಳಿಕವೂ ಟ್ರಂಪ್‍ರ ಆದಾಯ ತೆರಿಗೆ ವಿಷಯ ಚರ್ಚೆಯಾಗಿತ್ತು. ಚುನಾವಣೆ ಪ್ರಚಾರದಲ್ಲಿ ತನ್ನ ಆರ್ಥಿಕ ಯಶಸ್ಸಿನ ಕುರಿತು ಹೇಳಿಕೊಳ್ಳುವ ಟ್ರಂಪ್ ಆದಾಯ ತೆರಿಗೆಯಿಂದ ನುಣುಚಿಕೊಳ್ಳಲು ಅಪಾರ ನಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ. ನವೆಂಬರಿನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ಸ್ಪರ್ಧಿಸುತ್ತಿದ್ದು ತೆರಿಗೆ ವಂಚನೆ ಚರ್ಚೆಯಾಗಬಹುದು ಎಂದು ಪತ್ರಿಕೆ ಹೇಳಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.