ನೋ ವೋಟ್ ಟು ಬಿಜೆಪಿ(ಬಿಜೆಪಿಗೆ ವೋಟಿಲ್ಲ): ಟ್ವಿಟರ್‌ನಲ್ಲಿ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್

0
2414

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾನೂನು ವಿರುದ್ಧ ರೈತರ ಪ್ರತಿಭಟನೆಯು ಮುಂದುವರೆದಿದ್ದು ‘ಬಿಜೆಪಿಗೆ ವೋಟಿಲ್ಲ’ ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರಂಡ್ ಆಗಿದೆ. ಐದು ರಾಜ್ಯಗಳಲ್ಲಿ ವಿಧಾನಸಭೆಗೆ ಚುನಾವಣೆ ನಿಕಟವಾಗಿದ್ದು ನೋ ವೋಟ್ ಟು ಬಿಜೆಪಿ ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ರಾರಾಜಿಸುತ್ತಿದೆ.

ಹಲವಾರು ಮಂದಿ ಹ್ಯಾಶ್‍ಟ್ಯಾಗ್ ಶೇರ್ ಮಾಡಿದ್ದು ಕೇಂದ್ರ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ರೈತರ ಸಂಘಟನೆಯ ನೇತೃತ್ವದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಆರಂಭವಾಗಿದೆ. ರೈತ ವಿರೋಧಿ ನೀತಿಯ ವಿರುದ್ಧ ಜನರು ಒಟ್ಟಾಗಬೇಕೆಂದು ರೈತರು ಪ್ರಚಾರ ಮಾಡುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರೈತರ ನೇತೃತ್ವದಲ್ಲಿ ಬಜೆಪಿಗೆ ವೋಟಿಲ್ಲ ಎಂಬ ಪ್ರಚಾರ ನಡೆದಿದೆ. ಇದಕ್ಕೆ ಸಂಬಂಧಿಸಿ ನೋ ವೋಟ್ ‌ಟು ಬಿಜೆಪಿ ಪ್ರತಿಭಟನೆ ಟ್ವಿಟರ್ನಲ್ಲಿ ಅಗ್ರ ಸ್ಥಾನದಲ್ಲಿದೆ.

2022ರಲ್ಲಿ ರೈತರ ವರಮಾನ ದುಪ್ಟಟ್ಟು ಮಾಡುವುದು ಮೋದಿ ಸರಕಾರದ ಭರವಸೆಯಾಗಿದೆ. ಆದರೆ, ರೈತರು ಇದು ತಮಗೆ ಗೋರಿ ತೋಡಿದ್ದೆಂದು ರೈತರು ಹೇಳುತ್ತಿದ್ದಾರೆ. ರೈತರು ಮಾತ್ರವಲ್ಲ ಅಭಿಯನದಲ್ಲಿ ದೇಶದ ಸಕಲ ಜನರು ಬೆಂಬಲ ನೀಡಬೇಕೆಂದು ರೈತರು ಮನವಿ ಮಾಡಿಕೊಂಡಿದ್ದಾರೆ.