ಸನ್ಮಾರ್ಗ ವಾರ್ತೆ
ಕೇರಳ,ನ.6: ನವಜಾತ ಶಿಶುವನ್ನು ಮಾರುವ ಯತ್ನವನ್ನು ಪೊಲೀಸರು ತಡೆದಿದ್ದಾರೆ. ಕಕ್ಕಾಡ್ ಎಂಬಲ್ಲಿ ಬಾಡಿಗೆ ಮನೆಯಲ್ಲಿರುವ ಅಸ್ಸಾಮಿನ್ ಬಕ್ಬಾರ್ ಎಂಬಲ್ಲಿನ ನಿವಾಸಿ ದಂಪತಿಗಳು ಮಗುವನ್ನು ಮಾರಲು ಸಿದ್ಧರಾಗಿದ್ದರು. ಕಣ್ಣೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಅಕ್ಟೋಬರ್ 30ಕ್ಕೆ ಹೆರಿಗೆಯಾಗಿ ಏಳು ದಿನಗಳ ಹೆಣ್ಣುಮಗುವನ್ನು ಬಡತನ ಕಾರಣದಿಂದ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂದು ಸುದ್ದಿ ಗೊತ್ತಾಗಿ ಪೊಲೀಸರು ತನಿಖೆ ನಡೆಸಿದ್ದರು.
ಹೆರಿಗೆ ಸಮಯದಲ್ಲಿ ಕಣ್ಣೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವನ್ನು ಖರೀದಿಸಲು ಕಣ್ಣೂರಿನ ದಂಪತಿಗಳು ಮುಂದೆ ಬಂದಿದ್ದರು. ಇವರ ವಿಳಾಸವನ್ನೇ ಹೆರಿಗೆಯ ವೇಳೆ ಯುವತಿ ಆಸ್ಪತ್ರೆಗೆ ನೀಡಿದ್ದಳು. ಇದರೊಂದಿಗೆ ಅಸ್ಸಾಮಿನ ಯುವತಿ ಮಗುವು ಹೆತ್ತದ್ದಕ್ಕೆ ದಾಖಲೆಗಳು ಇಲ್ಲದಾಗಿವೆ. ಈ ಸುದ್ದಿ ಸಿಕ್ಕಿದುದರಿಂದ ಪೊಲೀಸರು ಯುವತಿ ವಾಸಿಸುವ ಕಕ್ಕಾಡ್ ಹಾಜಿ ಕ್ವಾಟ್ರರ್ಸ್ಗೆ ಬಂದು ದಂಪತಿ ಮತ್ತು ಮಗುವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮಗುವನ್ನು ತಂದೆ ತಾಯಿಗೆ ಕೊಟ್ಟರೆ ಪುನಃ ಮಾರಲು ಯತ್ನಿಸಬಹುದು. ಆದ್ದರಿಂದ ಅವರನ್ನು ಚೈಲ್ಡ್ ಲೈನ್ ಕಮಿಟಿಯ ಮುಂದೆ ಹಾಜರುಪಡಿಸಿ ಸಂರಕ್ಷಣೆಯನ್ನು ಖಚಿತ ಪಡಿಸಿಕೊಳ್ಳಲಾಗಿದೆ.












