ವಲಸೆ, ಮುಸ್ಲಿಂ ಜನಸಂಖ್ಯೆಯಲ್ಲಿನ ಹೆಚ್ಚಳ ದೇಶಕ್ಕೆ ಬೆದರಿಕೆಯಾಗಿದೆ- ಆಂಗ್‌ಸಾನ್ ಸೂಕಿ

0
637

ಬುಡಾಫೆಸ್ಟ್, ಜೂ.10: ವಲಸೆಗಾರರು ಮತ್ತು ಮುಸ್ಲಿಮರ ಜನಸಂಖ್ಯಾ ಹಚ್ಚಳ ದೇಶದ ಭದ್ರತೆಗೆ ಬೆದರಿಕೆಯಾಗಿದೆ ಎಂಬ ಜನಾಂಗೀಯವಾದಿ ಹೇಳಿಕೆಯನ್ನು ಮ್ಯಾನ್‍ಮಾರ್ ಸ್ಟೇಟ್ ಕೌನ್ಸಿಲರ್ ಮತ್ತು ಶಾಂತಿ ನೋಬೆಲ್ ಪಾರಿತೋಷಕ ವಿಜೇತೆ ಆಂಗ್ಸಾನ್ ಸೂಕಿ ಹೇಳಿದರು.

ಹಂಗೇರಿಯ ಬುಡಾಫೆಸ್ಟ್‌ನಲ್ಲಿ ನಡೆದಿದ್ದ ಚರ್ಚೆಯಲ್ಲಿ ಪಾಲ್ಗೊಂಡು ಮುಸ್ಲಿಂ ವಿರೋಧಿ ಹೇಳಿಕೆಯನ್ನು ಸೂಕಿ ನೀಡಿದರು. ನಮ್ಮೆರಡು ದೇಶಗಳು ಮತ್ತು ಯುರೋಪ್ ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆ ವಲಸೆಗಾರರು ಆಗಿದ್ದಾರೆ. ಮುಸ್ಲಿಂ ಜನಸಂಖ್ಯಾ ಹೆಚ್ಚಳ ಈ ವಲಯದಲ್ಲಿ ಸಹವರ್ತಿತ್ವಕ್ಕೆ ಬೆದರಿಕೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದರು. ಹಂಗೇರಿಯ ಪ್ರಧಾನಿ ಕೂಡ ಸಹಮತ ವ್ಯಕ್ತಪಡಿಸಿದರು. ಅವರು ಕಟ್ಟು ವಲಸೆ ವಿರೋಧಿಯಾಗಿದ್ದಾರೆ. ಮ್ಯಾನ್ಮಾರ್‍‌ನ ಪ್ರಜಾಪ್ರಭುತ್ವವಾದಿ ನಾಯಕಿಯಾಗಿ ಸೂಕಿಯನ್ನು ಗುರುತಿಸಲ್ಪಡುತ್ತಿದ್ದರು. ನಂತರ ಅವರು ತಮ್ಮ ನಿಲುವನ್ನು ಬದಲಾಯಿಸಿದ್ದರು.