ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಿಲ್ಲ: ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಿದ ಜೆಡಿಯು

0
420

ಪಾಟ್ನ,ಜೂ.10: ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ ಯುನೈಟೆಡ್ ಬಿಜೆಪಿಯೊಂದಿಗೆ ಸಖ್ಯಮಾಡಿಕೊಳ್ಳುವುದಿಲ್ಲ ಎಂದು ತೀರ್ಮಾನಿಸಿದೆ. ಪಾಟ್ನದಲ್ಲಿ ರವಿವಾರ ನಡೆದಿದ್ದ ಜೆಡಿಯು ಉನ್ನತಾಧಿಕಾರ ಸಭೆಯಲ್ಲಿ ತೀರ್ಮಾನವಾಗಿದ್ದು ಹರಿಯಾಣ, ಜಮ್ಮುಕಾಶ್ಮೀರ, ಝಾರ್ಕಂಡ್, ದಿಲ್ಲಿಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಪಾರ್ಟಿ ತೀರ್ಮಾನಿಸಿದೆ. ಬಿಹಾರದ ಹೊರಗೆ ಯಾವ ಪಾರ್ಟಿಯೊಂದಿಗೂ ಜೆಡಿಯು ಸಖ್ಯ ಮಾಡಿಕೊಳ್ಳುವುದಿಲ್ಲ. ನಾಲ್ಕು ರಾಜ್ಯಗಳ ಚುನಾವಣೆಗೆ ಬೇಕಾದ ರಣತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಜೆಡಿಯು ನಾಯಕ ಗುಲಾಂ ರಸೂಲ್ ಬಲಿಯಾವಿ ಹೇಳಿದರು.