ಜಿಐಓ ಕರ್ನಾಟಕ ನೂತನ ರಾಜ್ಯಾಧ್ಯಕ್ಷೆಯಾಗಿ ಆಯಿಷಾ ತಬಸ್ಸುಮ್ ಆಯ್ಕೆ

0
300

ಸನ್ಮಾರ್ಗ ವಾರ್ತೆ

ಬೆಂಗಳೂರು: 2023-24ನೇ ಸಾಲಿನ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್(ಜಿಐಓ) ನೂತನ ರಾಜ್ಯಾಧ್ಯಕ್ಷೆಯಾಗಿ ಮಂಗಳೂರಿನ ಆಯಿಷಾ ತಬಸ್ಸುಮ್ ಆಯ್ಕೆಯಾಗಿದ್ದಾರೆ. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರಿನ ಮುಬ್ರಾ ನಿಸಾರ್ ಆಯ್ಕೆಯಾಗಿದ್ದಾರೆ‌.

ಬಿಕಾಂ ಪದವೀಧರರಾದ ತಬಸ್ಸುಮ್ ತೊಕ್ಕೊಟ್ಟಿನ ಹಿರಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮೌಲ್ಯ ಶಿಕ್ಷಣ ವಿಭಾಗದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಬ್ರಾ ನಿಸಾರ್ ಫುಡ್ ಆ್ಯಂಡ್ ನ್ಯೂಟ್ರಿಷನ್‌ ಪದವಿಧರರಾಗಿದ್ದಾರೆ.

ಇದೇ ಸಂದರ್ಭದಲ್ಲಿ ವಲಯ ಸಲಹಾ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ವಿವರಗಳು ಈ ಕೆಳಗಿನಂತಿವೆ.

ಅಮತ್ಷು ಶಿಫಾ ಕೊಪ್ಪಳ, ಅಮೀನಾ ಕೌಸರ್ ಉಡುಪಿ, ಅಮೀನಾ ಮುಶೀರಾ ಮಂಗಳೂರು, ಬಸೀರಾ ಬಾನು ಚಿಕ್ಕಮಂಗಳೂರು, ಡಾ. ಆಯಿಶಾ ಫಿದಾ ಮಂಗಳೂರು, ಝೈನಬ್ ಗಜಾಲಿ ಉತ್ತರ ಕನ್ನಡ, ಜವೇರಿಯಾ ಬಳ್ಳಾರಿ, ಸಯ್ಯದಾ ನೌಷಾಬಾ ಕಲಬುರ್ಗಿ, ನವೀದಾ ಹುಸೇನ್ ಅಸದಿ ಹಾಸನ , ಮುಹಿ ನಿಷಾತ್ ರಾಯಚೂರು, ಸುಮಯ್ಯಾ ರೋಶನ್ ಬೆಂಗಳೂರು, ಸೀಮಾ ತಾಜ್ ಹುಮ್ನಾಬಾದ್, ಜುಫೀಶಾನ್ ನಿಖತ್ ಬಿಜಾಪುರ, ಹಿಬಾ ಫಾತಿಮಾ ಮಂಗಳೂರು ಹಾಗೂ ಕಲಬುರ್ಗಿಯ ಸೈಯದಾ ಅಜ್ರಾ ನಿಶಾತ್ ವಲಯ ಸಲಹಾ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷರಾದ ಡಾ.ಸಾದ್ ಬೆಳ್ಗಾಮಿ ಮತ್ತು ಕಾರ್ಯದರ್ಶಿ ಮುಹಮ್ಮದ್ ಬಿಲಾಲ್ ಹಾಗೂ ಮೌಲಾನಾ ಯೂಸುಫ್ ಕನ್ನಿ ಅವರ ಉಸ್ತುವಾರಿಯಲ್ಲಿ ಚುನಾವಣೆ ನಡೆಸಲಾಗಿತ್ತು.