ಸನ್ಮಾರ್ಗ ವಾರ್ತೆ
ಅಯೋಧ್ಯೆ: ಅಯೋಧ್ಯೆಯಲ್ಲಿ ಗಣರಾಜ್ಯೋತ್ಸವ ದಿನದಂದು ಮರ ನೆಡುವಿಕೆ ಹಾಗೂ ರಾಷ್ಟ್ರ ಧ್ವಜಾರೋಹಣದೊಂದಿಗೆ ಮಸೀದಿ ನಿರ್ಮಾಣ ಪ್ರಾರಂಭವಾಗಲಿದೆ ಎಂಬುದಾಗಿ ವರದಿಯಾಗಿದೆ.
ಇಂಡೋ-ಇಸ್ಲಾಮಿಕ್ ಫೌಂಡೇಶನ್ನ ಅಡಿಯಲ್ಲಿ ಈ ಮಸೀದಿ ನಿರ್ಮಾಣವಾಗಲಿದ್ದು, ಇದರೊಂದಿಗೆ ಗ್ರಂಥಾಲಯ, ಮ್ಯೂಸಿಯಮ್, ಸಮುದಾಯ ಪಾಕಶಾಲೆ ಸೇರಿದಂತೆ ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಸಂಶೋಧನಾ ಕೇಂದ್ರ ಮತ್ತು ಹಸಿರು ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಅಯೋಧ್ಯೆಯ ಶ್ರೀರಾಮ ಮಂದಿರಕ್ಕಿಂತ ಇಪ್ಪತೈದು ಕಿ.ಮೀ ದೂರದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಂಜೂರಾದ ಜಾಗದಲ್ಲಿ ನಿರ್ಮಾಣವಾಗಲಿದೆ.
ಗಣರಾಜ್ಯೋತ್ಸವ ದಿನದಂದು ಬೃಹತ್ ಕಾರ್ಯಕ್ರಮದೊಂದಿಗೆ ಮಸೀದಿ ನಿರ್ಮಾಣ ಕಾರ್ಯ ಆರಂಭಗೊಳಿಸುವ ಬಗ್ಗೆ ಫೌಂಡೇಶನ್ ಸಭೆಯಲ್ಲಿ ಚರ್ಚಿಸಿರುವ ಕುರಿತು ತಿಳಿದು ಬಂದಿದೆ. ಈಗಾಗಲೇ ವಿದೇಶದಿಂದ ದೇಣಿಗೆ ಸಂಗ್ರಹಕ್ಕೆ ಆದಾಯ ತೆರಿಗೆ ಇಲಾಖೆಯ ಕ್ಲಿಯರೆನ್ಸ್ ಕಾರ್ಯ ಮುಂದುವರಿದಿರುವ ಬಗ್ಗೆಯೂ ಮಾಹಿತಿ ನೀಡಲಾಗಿದೆ.












